ಪತ್ನಿ ಲೈಂಗಿಕ ಬಯಕೆ ಈಡೇರಿಸುತ್ತಿಲ್ಲ ಎಂದು ಮತ್ತೊಂದು ಮದುವೆಗೆ ಸಿದ್ಧನಾದ ವೃದ್ಧ!
ಗಾಂಧಿನಗರ: ಮರುಳು ಮಾತುಗಳನ್ನು ನಂಬಿ ಅದೆಷ್ಟೋ ಯುವತಿಯರು ಮೋಸ ಹೋಗುತ್ತಿದ್ದಾರೆ. ಇಲ್ಲೊಬ್ಬ 63ರ ವರ್ಷದಲ್ಲಿ 6 ಮದುವೆಯಾಗಿದ್ದು, 7ನೇ ವಧುವಿಗಾಗಿ ಈತ ಹುಡುಕಾಟ ಆರಂಭಿಸಿದ್ದಾನೆ.
ಈ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. 60 ವರ್ಷದ ಅಯ್ಯೂಬ್ ತನಗಿಂತ 21 ವರ್ಷ ವಯಸ್ಸಿನ ಅಂತರದ ಯುವತಿಯನ್ನು 6ನೇ ಮದುವೆಯಾಗಿದ್ದಾನೆ. ಮದುವೆಯ ವೇಳೆ ಯುವತಿಯು ವಿಧವೆಯಾಗಿರುವುದರಿಂದ ತಾನು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ತಾನು ಆಕೆಯ ಜೊತೆಗೆ ಲೈಂಗಿಕ ಬಯಕೆ ತೋರಿಸುವುದಿಲ್ಲ ಎಂದೂ ಹೇಳಿದ್ದಾನೆ. ಈತನ ಮಾತು ನಂಬಿ, ಹಲವು ಕಾಯಿಲೆಗಳಿಂದಲೂ ಬಳಲುತ್ತಿದ್ದ ಯುವತಿ ಈತನನ್ನು ವಿವಾಹವಾಗಿದ್ದಾಳೆ.
ವಿವಾಹವಾಗಿ ಕೆಲವು ದಿನಗಳಲ್ಲೇ ಅಯ್ಯೂಬ್ ತನ್ನ ಅತಿಯಾದ ಲೈಂಗಿಕ ಬಯಕೆಯನ್ನು ಪತ್ನಿಯ ಮೇಲೆ ತೋರಿಸಲು ಆರಂಭಿಸಿದ್ದಾನೆ. ಸೋಂಕು, ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ ಮೊದಲಾದ ಕಾಯಿಲೆಗಳಿಂದ ಬಳಲುತ್ತಿರುವ ಯುವತಿ ಈತನ ದಾಳಿಯಿಂದ ಜರ್ಝರಿತಳಾಗಿದ್ದಾಳೆ. ಹೀಗಾಗಿ ಮದುವೆಯಾಗಿ ಕೆಲ ತಿಂಗಳಿನಲ್ಲಿಯೇ ಯುವತಿ ಈ ವೃದ್ಧನಿಂದ ಬೇರ್ಪಟ್ಟಿದ್ದಾಳೆ.
ಇದೀಗ ತನ್ನ ಅತಿಯಾದ ಲೈಂಗಿಕ ಬಯಕೆ ಈಡೇರಿಸಿಕೊಳ್ಳಲು ವೃದ್ಧ ಅಯ್ಯೂಬ್ 7ನೇ ಮದುವೆಗೆ ಹುಡುಗಿ ಹುಡುಕುತ್ತಿದ್ದಾನೆ. 6ನೇ ಪತ್ನಿಗೆ ಅಯ್ಯೂಬ್ ನ ಬಗ್ಗೆ ಏನು ಗೊತ್ತಿರಲಿಲ್ಲ. ಹೀಗಾಗಿ ಆಕೆ ಈತ ಪೂರ್ವಾಪರವನ್ನು ಈತನಿಂದ ಬೇರ್ಪಟ್ಟ ಬಳಿಕ ವಿಚಾರಿಸಿದ್ದು, ಈ ವೇಳೆ ಆತನಿಗೆ 5 ವಿವಾಹ ಈಗಾಗಲೇ ಆಗಿದೆ. ತಾನು 6ನೇಯವಳು, ಈಗ ಆತ 7ನೇ ಮದುವೆಗೆ ವಧು ಹುಡುಕುತ್ತಿದ್ದಾನೆ ಎಂಬ ಸತ್ಯ ತಿಳಿದಾಗ ಬೆಚ್ಚಿ ಬಿದ್ದಿದ್ದಾಳೆ.
ಇನ್ನೂ ಈ ಸಂಬಂಧ ವೃದ್ಧ ಅಯ್ಯೂಬ್ ನನ್ನು ವಿಚಾರಿಸಿದಾಗ, ತನ್ನ ಪತ್ನಿಯ ಜೊತೆ ಲೈಂಗಿಕ ಬಯಕೆ ಹೇಳಿಕೊಂಡಾಗ ಆಕೆ ಕಾಯಿಲೆಗಳ ನೆಪ ಹೇಳಿದ್ದಾಳೆ, ತನ್ನ ಜೊತೆಗೆ ಸಹಕರಿಸುತ್ತಿಲ್ಲ. ಹೀಗಾಗಿ ತಾನು ಇನ್ನೊಂದು ಮದುವೆಯಾಗಲು ಹೊರಟಿದ್ದೇನೆ ಎಂದು ಹೇಳಿದ್ದಾನೆ.
ಈ ನಡುವೆ 6ನೇ ಪತ್ನಿ ಅಯ್ಯೂಬ್ ನ ವಿರುದ್ಧ ದೂರು ದಾಖಲಿಸಿದ್ದಾಳೆ. ತನ್ನನ್ನು ಯಾಮಾರಿಸಿ ಅಯ್ಯೂಬ್ ವಿವಾಹವಾಗಿದ್ದು, ಇದೀಗ 7ನೇ ವಿವಾಹಕ್ಕೆ ಆತ ರೆಡಿಯಾಗುತ್ತಿದ್ದಾನೆ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.