‘ದಿಲ್ಲಿ ಚಲೋ’ ದಲ್ಲಿ ಸಮರ: ಹೋರಾಟ ನಿರತ ರೈತರ ಮೇಲೆ ಪೊಲೀಸ್ ಅಶ್ರುವಾಯು

06/12/2024

ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ʼದಿಲ್ಲಿ ಚಲೋʼ ನಡೆಸಿದ್ದಾರೆ. ಶಂಭು ಗಡಿ ಬಳಿ ಪೊಲೀಸರು ನಿರ್ಮಿಸಿದ್ದ ತಡೆಗೋಡೆಯ ಮುಳ್ಳು ತಂತಿ ಬೇಲಿಗಳನ್ನು ತೆರವುಗೊಳಿಸಿ ರೈತರು ಮುನ್ನುಗ್ಗಲು ಮುಂದಾದಾಗ ಪೊಲೀಸರು ರೈತರ ಮೇಲೆ ಅಶ್ರುವಾಯುಗಳನ್ನು ಪ್ರಯೋಗಿಸಿದ್ದಾರೆ. ಪ್ರತಿಭಟನೆಯ ವೇಳೆ ಕೆಲ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾಂಕ್ರೀಟ್ ಬ್ಲಾಕ್ ಗಳು, ಕಬ್ಬಿಣದ ಮೊಳೆಗಳು ಹಾಗೂ ಮುಳ್ಳು ತಂತಿಗಳನ್ನು ಭೇದಿಸುವಲ್ಲಿ ಪ್ರತಿಭಟನಕಾರರು ವಿಫಲಗೊಂಡಿದ್ದಾರೆ. ಹೀಗಾಗಿ, ಅವರು ತಮ್ಮ ಮೆರವಣಿಗೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಧಾನದ ಬಾಗಿಲುಗಳು ಮುಕ್ತವಾಗಿವೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.
ಎಂಎಸ್ಪಿ ಜಾರಿಗೆ ಒತ್ತಾಯಿಸಿದ ರೈತರು ಇದಕ್ಕೂ ಮುನ್ನ ಫೆಬ್ರವರಿ 13 ಹಾಗೂ ಫೆಬ್ರವರಿ 21ರಂದು ದಿಲ್ಲಿಯತ್ತ ಮೆರವಣಿಗೆ ತೆರಳಲು ಪ್ರಯತ್ನಿಸಿದ್ದರು.

ಆದರೆ, ಪಂಜಾಬ್-ಹರ್ಯಾಣ ಗಡಿಗಳ ಶಂಭು ಮತ್ತು ಖನೌರಿ ಬಳಿ ಅವರನ್ನು ಭದ್ರತಾ ಪಡೆಗಳು ತಡೆದಿದ್ದವು. ಅಂದಿನಿಂದ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಝ್ದೂರ್ ಮೋರ್ಚಾಗಳ ನೇತೃತ್ವದಲ್ಲಿ ಶಂಭು ಮತ್ತು ಖನೌರಿ ಗಡಿಗಳ ಬಳಿ ರೈತರು ಧರಣಿ ನಡೆಸುತ್ತಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ರೈತರ ನಾಯಕರಾದ ಸುರ್ಜೀತ್ ಸಿಂಗ್ ಫೂಲ್, ಸತ್ನಮ್ ಸಿಂಗ್ ಪನ್ನು, ಸವೀಂದರ್ ಸಿಂಗ್ ಚೌತಾಲ, ಬಲ್ಜಿಂದರ್ ಸಿಂಗ್ ಚಡಿಯಾಲ ಹಾಗೂ ಮಂಜಿತ್ ಸಿಂಗ್ ನೇತೃತ್ವದಲ್ಲಿ 101 ರೈತರ ಗುಂಪು ಸಂಸತ್ತಿನೆಡೆಗೆ ಮೆರವಣಿಗೆ ಹೊರಟಿತ್ತು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version