8 ತಿಂಗಳ ಗರ್ಭಿಣಿಗೆ  3 ಕಿ.ಮೀ. ನಡೆಸುವ ಶಿಕ್ಷೆ ನೀಡಿದ ಮಹಿಳಾ ಪೊಲೀಸ್ - Mahanayaka
6:08 AM Wednesday 13 - November 2024

8 ತಿಂಗಳ ಗರ್ಭಿಣಿಗೆ  3 ಕಿ.ಮೀ. ನಡೆಸುವ ಶಿಕ್ಷೆ ನೀಡಿದ ಮಹಿಳಾ ಪೊಲೀಸ್

odisha
29/03/2021

ಒಡಿಸ್ಸಾ:  ಮಹಿಳಾ ಅಧಿಕಾರಿಯೋರ್ವಳು 8 ತಿಂಗಳ ಗರ್ಭವತಿ ಮಹಿಳೆಯನ್ನು ಮೂರು ಕಿ.ಮೀ ನಡೆಯುವಂತೆ ಮಾಡಿ ಅಮಾನವೀಯತೆ ತೋರಿದ ಘಟನೆ ಮಯೂರಭಂಜ್ ಜಿಲ್ಲೆಯಲ್ಲಿ ನಡೆದಿದೆ.

ರೀನಾ ಬಕ್ಸಲಾ ಹೆಸರಿನ ಪೊಲೀಸ್ ಅಧಿಕಾರಿ ಗರ್ಭಿಣಿಯ ಜೊತೆಗೆ ಮನುವಾದಿ ವರ್ತನೆ ತೋರಿದ್ದು, ಸಾರ್ವಜನಿಕರು ಈ ಘಟನೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಶನಿವಾರ ನಡೆದಿದ್ದು, ಹೆಲ್ಮೆಟ್ ಧರಿಸದ ಬಿಕ್ರಮ್ ಬರುಲಿ ಹಾಗೂ ಆತನ ಪತ್ನಿಯನ್ನು ರೀನಾ ತಡೆದು ದಂಡ ವಿಧಿಸಿದ್ದಾರೆ.  ಬಿಕ್ರಮ್ ಬರುಲಿ ಅವರ ಬಳಿ ನಗದು ಹಣ ಇಲ್ಲದಿದ್ದರಿಂದ ಆನ್‍ ಲೈನ್ ಪೇಮೆಂಟ್ ಮಾಡಲು ಮುಂದಾಗಿದ್ದರು. ಆದರೆ, ಇದಕ್ಕೆ ಒಪ್ಪದ ಪೊಲೀಸ್ ಅಧಿಕಾರಿ ರೀನಾ,ಆ ದಂಪತಿಯನ್ನು ಸರತ್ ಪೊಲೀಸ್ ಠಾಣೆಯವರೆಗೆ ಬೈಕ್ ತಳ್ಳಿಕೊಂಡು ಬರುವ ಶಿಕ್ಷೆ ನೀಡಿದ್ದಾರೆ.

ಬೈಕ್ ಸವಾರ ಬಿಕ್ರಮ್ ಅವರ ಪತ್ನಿ 8 ತಿಂಗಳ ಗರ್ಭಿಣಿ. ಅವರಿಗೆ 3 ಕಿ.ಮೀ ನಡೆಯುವುದು ಕಷ್ಟದ ಕೆಲಸ. ಆದರೆ, ಇದ್ಯಾವುದನ್ನೂ ಲೆಕ್ಕಿಸದ ರೀನಾ, ಆಕೆಯನ್ನೂ ಗಂಡನ ಜತೆ ನಡೆದುಕೊಂಡು ಬರುವಂತೆ ಮಾಡಿದ್ದಾರೆ. ಇದರಿಂದ ಆ ಗರ್ಭಿಣಿಯ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಪೊಲೀಸ್ ಅಧಿಕಾರಿ ರೀನಾ ಅವರ ಕ್ರೂರತೆ ವಿರುದ್ಧ ಬಿಕ್ರಮ್ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.




ಗರ್ಭಿಣಿ ಜೊತೆಗೆ ಮನುವಾದಿ ವರ್ತನೆ ತೋರಿದ ರೀನಾ ಬಕ್ಸಲ್ ಅವರಿಗೆ ತಕ್ಕ ಶಿಕ್ಷೆಯಾಗಿದೆ. ಮಯೂರಭಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಮೀತಾ ಪರ್ಮಾರ್ ಅವರು ರೀನಾ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಹಾಗೂ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಇತ್ತೀಚಿನ ಸುದ್ದಿ