ಅಜ್ಮೀರ್ ನಲ್ಲಿ ಹಿಂದಿ ಮೀಡಿಯಂ ಸ್ಕೂಲಾಗಿ ಪರಿವರ್ತನೆಗೊಂಡ 8 ಉರ್ದು ಸ್ಕೂಲ್ ಗಳು: ವ್ಯಾಪಕ ಆಕ್ರೋಶ
ರಾಜಸ್ಥಾನದ ಅಜ್ಮೀರ್ ನಲ್ಲಿ 8 ಉರ್ದು ಮೀಡಿಯಂ ಸ್ಕೂಲ್ ಗಳನ್ನು ಹಿಂದಿ ಮೀಡಿಯಂ ಶಾಲೆಗಳಾಗಿ ಪರಿವರ್ತಿಸಲಾಗಿದ್ದು, ಇದರ ವಿರುದ್ಧ ಸ್ಥಳೀಯ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಶಾಲೆಗಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗಳಾಗಿ ಪರಿವರ್ತಿಸುವ ಮೂಲಕ ಮುಸ್ಲಿಮರ ಸಾಂಸ್ಕೃತಿಕ ಮತ್ತು ಧಾರ್ಮಿಕ ಅನನ್ಯತೆಯನ್ನು ಬದಲಿಸುವ ಶ್ರಮ ನಡೆಸಲಾಗಿದೆ ಎಂದು ಮುಸ್ಲಿಮರು ಆರೋಪಿಸಿದ್ದಾರೆ.
ಪಾರ್ಸಿ ಮತ್ತು ಉರ್ದು ಪದಗಳಿಗೆ ಬದಲಾಗಿ ಹಿಂದಿ ಪದವನ್ನು ಬಳಸುವಂತೆ 2024 ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಿಜೆಪಿ ಸರ್ಕಾರ ರಾಜ್ಯ ನೀತಿ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಈ ಆದೇಶದ ಬಳಿಕ ಈ ಬದಲಾವಣೆ ನಡೆದಿದೆ. ಮುಖ್ಯವಾಗಿ ಅಜ್ಮೀರ್ ನಲ್ಲಿರುವ ಹಲವು ಉರ್ದು ಶಾಲೆಗಳನ್ನು ಹಿಂದಿ ಮೀಡಿಯಂ ಶಾಲೆಗಳಾಗಿ ಬದಲಿಸುವಂತೆ ಜನವರಿ 17ರಂದು ರಾಜ್ಯ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಈ ನಿರ್ದೇಶನದಿಂದಾಗಿ ತೊಂದರೆಗೊಳಗಾಗುವ ಶಾಲೆಗಳ ಪೈಕಿ ಬದಾವ್ ನಲ್ಲಿರುವ ಸರ್ಕಾರಿ ಪ್ರೈಮರಿ ಉರ್ದು ಸ್ಕೂಲ್ ಮತ್ತು ಸರ್ಕಾರಿ ಗರ್ಲ್ಸ್ ಹೈ ಪ್ರೈಮರಿ ಉರ್ದು ಸ್ಕೂಲ್ ಎರಡು ಸೇರಿವೆ. 1941ರಲ್ಲಿ ಈ ಶಾಲೆಗಳನ್ನು ಪ್ರಾರಂಭಿಸಲಾಗಿತ್ತು
ಈ ಬೆಳವಣಿಗೆಯು ಮುಸ್ಲಿಂ ಸಮುದಾಯವನ್ನು ಆತಂಕಕ್ಕೆ ತಳ್ಳಿದೆ. ಈ ಮೊದಲೇ ಉರ್ದು ಪಠ್ಯ ಪುಸ್ತಕಗಳ ಕೊರತೆ ಮತ್ತು ಪರಿಣತ ಉರ್ದು ಶಿಕ್ಷಕರ ಕೊರತೆಯೂ ಇತ್ತು. ಇದೀಗ ಶಾಲೆಗಳನ್ನೇ ಬದಲಾಯಿಸುವ ತೀರ್ಮಾನಕ್ಕೆ ಸರಕಾರ ಹೊರಟಿರುವುದು ಉರ್ದು ಭಾಷೆಯ ಬೆಳವಣಿಗೆ ಮತ್ತು ಸಾಹಿತ್ಯದ ಮೇಲೆ ತೀವ್ರ ಅಡ್ಡ ಪರಿಣಾಮ ಬೀರಗಲಿದೆ ಎಂದು ಸ್ಥಳೀಯ ಮುಸ್ಲಿಮರು ಆತಂಕ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj