8 ವರ್ಷ ಬಾಲಕನ ಮೇಲೆ ಮಲತಾಯಿಯಿಂದಲೇ ದುಷ್ಕೃತ್ಯ; ಕೊನೆಗೂ ಬಾಲಕನನ್ನು ರಕ್ಷಿಸಿದ ಪೊಲೀಸರು
ದೆಹಲಿ: ಮಲತಾಯಿಯಿಂದ ಕಿರುಕುಳಕ್ಕೆ ಒಳಗಾಗಿದ್ದ 8 ವರ್ಷದ ಬಾಲಕನ್ನು ದೆಹಲಿ ಮಹಿಳಾ ಆಯೋಗ ರಕ್ಷಿಸಿದ್ದು, ಮಲತಾಯಿಯು ಬಾಲಕನನ್ನು ಹಗ್ಗಗಳಿಂದ ಕಟ್ಟಿ ಹಿಂಸಿಸುತ್ತಿದ್ದಳು ಮತ್ತು ಯಾರೊಂದಿಗೂ ಬೆರೆಯಲು ಬಿಡುತ್ತಿರಲಿಲ್ಲ ಎಂದು ಹೇಳಲಾಗಿದೆ.
ಮನೆಯೊಂದರಲ್ಲಿ ಮಲತಾಯಿ 8 ವರ್ಷದ ಬಾಲಕನಿಗೆ ಹಿಂಸೆ ನೀಡುತ್ತಿದ್ದಾಳೆ ಎನ್ನುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದೆಹಲಿ ಮಹಿಳಾ ಆಯೋಗ ತಂಡ, ಪಶ್ಚಿಮ ದೆಹಲಿಯ ಹರಿ ನಗರದಲ್ಲಿರುವ ಬಾಲಕನ ನಿವಾಸಕ್ಕೆ ತೆರಳಿದ್ದು, ಅಲ್ಲಿಂದ ಬಾಲಕನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಮಲತಾಯಿ ಏನೆಲ್ಲ ಹಿಂಸೆ ನೀಡುತ್ತಿದ್ದಳು ಎಂದು ಪೊಲೀಸರು ಪ್ರಶ್ನಿದಾಗ, ಮನೆಯಿಂದ ಹೊರ ಹೋಗುವಾಗ ನನ್ನ ಕೈಗಳನ್ನು ಕಟ್ಟಿ ಹಾಕುತ್ತಿದ್ದಳು ಮತ್ತು ತಾನು ಯಾರೊಂದಿಗೂ ಬೆರೆಯಲು ಬಿಡುತ್ತಿರಲಿಲ್ಲ, ನನ್ನನ್ನು ನೆಲದಲ್ಲಿಯೇ ಮಲಗಿಸುತ್ತಿದ್ದಳು. ಸರಿಯಾಗಿ ಊಟ ಕೂಡ ಕೊಡುತ್ತಿರಲಿಲ್ಲ ಎಂದು ಬಾಲಕ ತಿಳಿಸಿದ್ದಾನೆ.
ಪರಿಶೀಲನೆಯ ವೇಳೆ ಬಾಲಕನ ದೇಹದಲ್ಲಿ ಸಣ್ಣಪುಟ್ಟ ಗಾಯಗಳು ಕೂಡ ಪತ್ತೆಯಾಗಿದೆ. ಆತನ ಬೆನ್ನಿನ ಮೇಲೆ ಕೆಲವು ಗೀರು ಗುರುತುಗಳು ಪತ್ತೆಯಾಗಿದೆ. ಸದ್ಯ ಬಾಲಕನನ್ನು ದೆಹಲಿಯ ಮಹಿಳಾ ಆಯೋಗವು ವೈದ್ಯಕೀಯ ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ.
ಸಾಂದರ್ಭಿಕ ಚಿತ್ರ: