8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ಅಪರಾಧಿಗೆ ಮರಣದಂಡನೆ - Mahanayaka
10:31 PM Sunday 15 - December 2024

8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ಅಪರಾಧಿಗೆ ಮರಣದಂಡನೆ

court judgement
05/09/2021

ಉತ್ತರಪ್ರದೇಶ:  ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿಂತೆ ಉತ್ತರಪ್ರದೇಶದ ಫೋಕ್ಸೋ ನ್ಯಾಯಾಲಯವೊಂದು ಅಪರಾಧಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ 1.4 ಲಕ್ಷ ರೂ. ದಂಡವನ್ನೂ ವಿಧಿಸಿದೆ.

8 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅಶೋಕ್ ಕುಮಾರ್ ಎಂಬಾತ ಅತ್ಯಾಚಾರ ನಡೆಸಿ ಹತ್ಯೆ ನಡೆಸಿದ ಪ್ರಕರಣವನ್ನು ವಿಚಾರಣೆ ನಡೆಸಿದ ಬಳಿಕ ಆರೋಪಿಯು ಅಪರಾಧಿ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ  ಫೋಕ್ಸೋ ಕೋರ್ಟ್ ನ ವಿಶೇಷ ನ್ಯಾಯಾಧೀಶೆ ಪಲ್ಲವಿ ಅಗರ್ವಾಲ್ ಅವರು ಅಪರಾಧಿಗೆ ಮರಣದಂಡನೆ ನೀಡಿ ಆದೇಶಿಸಿದ್ದಾರೆ.

ಆಗಸ್ಟ್ 4, 2020ರಂದು  ಉತ್ತರ ಪ್ರದೇಶದ ಖುರ್ಜಾ ಪ್ರದೇಶದಲ್ಲಿ ಸಂತ್ರಸ್ತೆ ಹಾಗೂ ಆಕೆಯ ಸಹೋದರಿ, ಇಲ್ಲಿನ ಸಹಕಾರ ಸಂಘದ ಗೋಡೌನ್ ಬಳಿ ಇರುವ ಮರವೊಂದರಿಂದ ಹಣ್ಣು ಕೀಳಲು ಹೋಗಿದ್ದರು. ಈ ವೇಳೆ ಅಶೋಕ್ ಕುಮಾರ್ 8 ವರ್ಷ ವಯಸ್ಸಿನ ಸಂತ್ರಸ್ತೆಗೆ ತಿಂಡಿ ಕೊಡಿಸುವ ಆಸೆ ತೋರಿಸಿ ಪಕ್ಕದ ಮೈದಾನಕ್ಕೆ ಕರೆದೊಯ್ದಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಹತ್ಯೆ ಮಾಡಿದ್ದ.

ಇತ್ತ ಮನೆಗೆ ಸಂತ್ರಸ್ತ ಬಾಲಕಿಯ ತಂಗಿ ಮಾತ್ರವೇ ಮರಳಿ ಬಂದಿರುವುದನ್ನು ಕಂಡ ಪೋಷಕರು  ಅಶೋಕ್ ನನ್ನು ಪ್ರಶ್ನಿಸಿದ್ದಾರೆ. ಆತನ ಮೇಲೆ ಅನುಮಾನ ಹೆಚ್ಚಾದಾಗ ಗ್ರಾಮಸ್ಥರು ಕಠಿಣ ಭಾಷೆಯಲ್ಲಿ ಆತನನ್ನು ಪ್ರಶ್ನಿಸಿದ್ದು, ಈ ವೇಳೆ ಹೆದರಿ ಸತ್ಯ ಒಪ್ಪಿಕೊಂಡಿದ್ದು, ಬಾಲಕಿಯ ಮೃತದೇಹವನ್ನು ಕಬ್ಬಿನ ಗದ್ದೆಯಲ್ಲಿ ಚೀಲದಲ್ಲಿ ಇಟ್ಟಿರುವುದಾಗಿ ಹೇಳಿದ್ದ. ಆ ಬಳಿಕ ಬಾಲಕಿಯ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಇದೀಗ ಫೋಕ್ಸೋ ನ್ಯಾಯಾಲಯವು ಅಪರಾಧಿಗೆ ಮರಣ ದಂಡನೆ ವಿಧಿಸಿದೆ. ಈ ಸಂಬಂಧ ಸಂತ್ರಸ್ತ ಬಾಲಕಿಯ ತಂದೆ ಪ್ರತಿಕ್ರಿಯಿಸಿದ್ದು, ಆತನ ತಪ್ಪಿಗೆ ಶಿಕ್ಷೆಯನ್ನು ಘೋಷಿಸಿರುವುದು ಸಂತಸ ತಂದಿದೆ. ಆದರೆ, ಆತನಿಗೆ ಶಿಕ್ಷೆಯಾಗುವವರೆಗೂ ನಮಗೆ ಸಮಾಧಾನವಾಗದು ಎಂದು ಹೇಳಿದ್ದಾರೆ.

ಇನ್ನಷ್ಟು ಸುದ್ದಿಗಳು…

ದೆಹಲಿ ಪೊಲೀಸ್ ಸಬಿಯಾ ಸೈಫಿ ಸಾಮೂಹಿಕ ಅತ್ಯಾಚಾರ, ಬರ್ಬರ ಹತ್ಯೆ | 50 ಬಾರಿ ಚುಚ್ಚಿದರು, ಅಂಗಾಂಗ ಕತ್ತರಿಸಿದರು!

ಕುಟುಂಬ ಸಂಘಟನೆಯ ಬದಲು ಪಕ್ಷ ಸಂಘಟನೆ ಧ್ಯೇಯವಾಗಿರಲಿ  | ಬಿ.ವೈ.ವಿಜಯೇಂದ್ರಗೆ ಯತ್ನಾಳ್ ಟಾಂಗ್

ಮಲಂಕರ ಧಮ೯ಕ್ಷೇತ್ರದ ಧಮಾ೯ಧ್ಯಕ್ಷ ಎಂ.ಆರ್.ಆಬ್ರಾಹಂರನ್ನು ಭೇಟಿ ಮಾಡಿದ ಐವನ್ ಡಿಸೋಜಾ

ಶಾಸಕ ದಂಪತಿಗೆ ಹೂವಿನ ಮಳೆ ಸುರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ನೋಟಿಸ್!

ಬೈಕು, ಟಿವಿ, ಫ್ರಿಡ್ಜ್ ಹೊಂದಿದವರ ಪಡಿತರ ಚೀಟಿ ರದ್ದಾಗುವುದೇ? | ಕೊನೆಗೂ ಸ್ಪಷ್ಟನೆ ನೀಡಿದ ಇಲಾಖೆ

ನಿಮ್ಮ ಜೀವ ನಿಮ್ಮ ರಕ್ಷಣೆ ಎಂಬುದನ್ನು ಮರೆಯಬೇಡಿ | ಸಿಎಂ ಬಸವರಾಜ್ ಬೊಮ್ಮಾಯಿ

ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ವಾಹನಗಳನ್ನು ತಡೆದ ಯುವತಿ | “ಏನಾಯ್ತಮ್ಮಾ…” ಎಂದು ಕೇಳಲು ಹೋದವರಿಗೆ ಅವಾಚ್ಯ ಬೈಗುಳ!

ಇತ್ತೀಚಿನ ಸುದ್ದಿ