ಫೇಸ್ ಬುಕ್ ಲವ್: ತನ್ನ ಅಜ್ಜಿಯ ವಯಸ್ಸಿನ ಮಹಿಳೆಯನ್ನು ವಿವಾಹವಾದ ಯುವಕ! - Mahanayaka

ಫೇಸ್ ಬುಕ್ ಲವ್: ತನ್ನ ಅಜ್ಜಿಯ ವಯಸ್ಸಿನ ಮಹಿಳೆಯನ್ನು ವಿವಾಹವಾದ ಯುವಕ!

08/01/2021

ವೃದ್ಧರು ಎಳೆಯ ವಯಸ್ಸಿನ ಯುವತಿಯರನ್ನು ವಿವಾಹವಾಗುತ್ತಿರುವ ಸುದ್ದಿಗಳು ಸಾಮಾನ್ಯವಾಗಿ ಕೇಳುತ್ತಲೇ ಇರುತ್ತೇವೆ. ಹುಡುಗಿ ಹಣಕ್ಕಾಗಿ  ವೃದ್ಧನನ್ನು ಮದುವೆಯಾಗಿದ್ದಾಳೆ ಎಂದು ಹೊಟ್ಟೆ ಉರಿದುಕೊಳ್ಳುವ ಯುವಕರಿಗೇನು ಕಡಿಮೆ ಇಲ್ಲ. ಆದರೆ ಇಲ್ಲೊಬ್ಬ ತನ್ನ ಅಜ್ಜಿಯ ವಯಸ್ಸಿನ ಮಹಿಳೆಯನ್ನು ವಿವಾಹವಾಗಿದ್ದಾನೆ.

ಈಜಿಫ್ಟ್ ಮೂಲದ 35 ವರ್ಷದ ಮೊಹಮ್ಮದ್ ಅಹ್ಮದ್ ಇಬ್ರಾಹಿಂ, ಇಂಗ್ಲೆಂಡ್ ನ 81 ವರ್ಷದ  ಐರಿಸ್ ಜಾನ್ಸ್ ಅವರಿಗೆ ಫೇಸ್ ಬುಕ್ ಮೂಲಕ ಪರಿಚಯವಾಗಿತ್ತು.  ಪರಿಚಯ ಪ್ರೀತಿಯಾಗಿ ಬದಲಾಗಿ ಕೊನೆಗೆ ಇಬ್ಬರು ಕೂಡ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ.

ಐರಿಸ್ ಅವರು ವೀಸಾ ಪಡೆದು ಈಜಿಫ್ಟ್ ಗೆ ಬಂದಿದ್ದು, ಇಲ್ಲಿ ಮೊಹಮ್ಮದ್ ಅಹ್ಮದ್ ಇಬ್ರಾಹಿಂ  ಜೊತೆಗೆ ಅವರು ಸರಳ ವಿವಾಹವಾಗಿದ್ದಾರೆ. ಮದುವೆಯ ಬಳಿಕ ಇಂಗ್ಲೆಡ್ ನಲ್ಲಿಯೇ ಇಬ್ಬರು ವಾಸಿಸಲು ನಿರ್ಧರಿಸಿದ್ದಾರಂತೆ.

ಇನ್ನೂ ಐರಿಸ್ ಅವರ ಜೊತೆಗಿನ ಪ್ರೀತಿಯ ಬಗ್ಗೆ ಮಾತನಾಡಿರುವ ಮೊಹಮ್ಮದ್  “ನಾನು ಐರಿಸ್ ಅವರನ್ನು ನನ್ನ ಕೊನೆಯ ಉಸಿರು ಇರುವವರೆಗೂ ಬಿಟ್ಟಿರುವುದಿಲ್ಲ” ಎಂದು ಹೇಳಿದ್ದಾರೆ. ಇನ್ನೂ ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ. ಕೆಲವರು ಮೊಹಮ್ಮದ್ ನ ಕಾಲೆಳೆದಿದ್ದು, ನೀನು ಐರಿಸ್ ನ್ನು ಸಾಯುವವರೆಗೆ ಬಿಟ್ಟು ಹೋಗದಿದ್ದರೂ , ಇನ್ನು ಸ್ವಲ್ಪ ಸಮಯದಲ್ಲಿ ಅವರೇ ಹೋಗುತ್ತಾರೆ ಎಂದು ಟ್ರೋಲ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ