ಇವ್ರ ದಾಂಪತ್ಯ ಜೀವನಕ್ಕೆ 84 ವರ್ಷ: ಗಿನ್ನೆಸ್ ದಾಖಲೆ ಮಾಡಿದ ದಂಪತಿ

17/02/2025
ಪತಿ ಪತ್ನಿಯರಾಗಿ 84 ವರ್ಷಗಳಿಂದ ಬದುಕುತ್ತಿರುವ ಬ್ರೆಜಿಲ್ ನ ಮನೋಯ ಮತ್ತು ಮರಿಯ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ. 1940ರಲ್ಲಿ ಇವರಿಬ್ಬರೂ ಮದುವೆಯಾದರು. ಇವ್ರದ್ದು ಪ್ರೇಮ ವಿವಾಹವಾಗಿತ್ತು. ಆರಂಭದಲ್ಲಿ ಈ ಮರಿಯರ ಹೆತ್ತವರು ಮದುವೆಯ ಬಗ್ಗೆ ಅಸಮಾಧಾನ ಹೊಂದಿದ್ದರು.
ಇವರಿಗೆ 13 ಮಕ್ಕಳು ಮತ್ತು 55 ಮೊಮ್ಮಕ್ಕಳಿದ್ದಾರೆ. ಹಾಗೆಯೇ ಈ ಮೊಮ್ಮಕ್ಕಳಿಗೆ 54 ಮಕ್ಕಳಿದ್ದಾರೆ. ಇವರ ಮಕ್ಕಳಿಗೆ 12 ಮಕ್ಕಳಿದ್ದಾರೆ.
ಮನೋಯ ಅವರಿಗೆ 105 ವಯಸ್ಸಾದರೆ ಮರಿಯಾ ಅವರಿಗೆ 101 ವಯಸ್ಸು. ಜಗತ್ತಿನಲ್ಲಿಯೇ ದಂಪತಿಗಳಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಜೊತೆಯಾಗಿ ಬದುಕಿದವರು ಇವರು ಎಂಬ ಗಿನ್ನೆಸ್ ರೆಕಾರ್ಡ್ ಇದೀಗ ಇವರ ಹೆಸರಿಗೆ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj