ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ ವಿಮಾನದ 85 ವಿಮಾನಗಳಿಗೆ ಬಾಂಬ್ ಬೆದರಿಕೆ
ಕಳೆದೊಂದು ವಾರದಲ್ಲಿ ಅಕಾಸಾ ಏರ್, ಏರ್ ಇಂಡಿಯಾ, ಇಂಡಿಗೊ ಮತ್ತು ವಿಸ್ತಾರಾ ಸೇರಿದಂತೆ ಸುಮಾರು 85 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಇವೆಲ್ಲವೂ ನಂತರ ಹುಸಿ ಎಂದು ದೃಢಪಡಿಸಲಾಯಿತು. ಇದರಲ್ಲಿ ಅಕಾಸಾ ಏರ್ ನ 25 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದೆ. ನಂತರ ಏರ್ ಇಂಡಿಯಾ, ಇಂಡಿಗೊ ಮತ್ತು ವಿಸ್ತಾರಾದ ತಲಾ 20 ವಿಮಾನಗಳು ಬಂದಿವೆ.
ಈ ಬೆದರಿಕೆಗಳ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಪ್ರತಿಕ್ರಿಯಿಸಿದ್ದು, ಬೆದರಿಕೆಯನ್ನು ನಿಗ್ರಹಿಸಲು ಸಚಿವಾಲಯವು ಗಂಭೀರ ಪರಿಹಾರಗಳನ್ನು ಹುಡುಕುತ್ತಿದೆ. ಯಾಕೆಂದರೆ ನಕಲಿ ಬಾಂಬ್ ಬೆದರಿಕೆಗಳು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತಿವೆ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಿವೆ ಎಂದಿದ್ದಾರೆ.
ಇತ್ತೀಚೆಗೆ ಭುವನೇಶ್ವರದಿಂದ ಬೆಂಗಳೂರಿಗೆ ಬರುತ್ತಿದ್ದ ಅಕಾಸಾ ಏರ್ ವಿಮಾನವು ಏರ್ ಪೋರ್ಟ್ ನಿಂದ ಹೊರಡುವ ಮುನ್ನ ಬಾಂಬ್ ಬೆದರಿಕೆ ಬಂದಿತ್ತು. ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದರು. ತೀವ್ರ ತನಿಖೆಯ ನಂತರ ಯಾವುದೇ ಸ್ಫೋಟಕಗಳು ಕಂಡುಬರಲಿಲ್ಲ. ಹೀಗಾಗಿ ತದನಂತರ ವಿಮಾನವನ್ನು ಟೇಕ್ ಆಫ್ ಮಾಡಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth