370 ದಿನಗಳಲ್ಲಿ 8,640 ಕಿ.ಮೀ: ಕೇರಳದಿಂದ ಕಾಲ್ನಡಿಗೆಯಲ್ಲೇ ಮಕ್ಕಾ ತಲುಪಿದ ಯುವಕನ ಅದ್ಬುತ ಹಜ್ ಪ್ರಯಾಣ..!

- ಶಂಶೀರ್ ಬುಡೋಳಿ
ಕೇರಳದ ಯುವಕರೋರ್ವರು ತಮ್ಮ ರಾಜ್ಯದಿಂದ ಕಾಲ್ನಡಿಗೆಯಲ್ಲೇ ಮುಸ್ಲಿಮರ ಪವಿತ್ರ ಸ್ಥಳ ಮಕ್ಕಾವನ್ನು 370 ದಿನಗಳಲ್ಲಿ ತಲುಪಿ ತಮ್ಮ ಗುರಿಯನ್ನು ಮುಟ್ಟಿ ಯಶಸ್ವಿಯಾಗಿದ್ದಾರೆ.
ಹೌದು…
ಅವರ ಹೆಸರೇ ಶಿಹಾಬ್ ಚೊಟ್ಟೂರ್. 370 ದಿನಗಳಲ್ಲಿನ ಇವರ 8,640 ಕಿ.ಮೀ ಪ್ರಯಾಣವು ಪಾಕಿಸ್ತಾನ, ಇರಾನ್, ಇರಾಕ್, ಕುವೈತ್ ಮತ್ತು ಅಂತಿಮವಾಗಿ ಸೌದಿ ಅರೇಬಿಯಾದ ಮೂಲಕ ಕೊನೆಗೊಂಡಿತು.
ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ವಳಂಚೇರಿ ಕೊಟ್ಟಕ್ಕಲ್ ಮೂಲದ ಶಿಹಾಬ್ ಚೊಟ್ಟೂರ್ ಅವರು ಜೂನ್ 2, 2022 ರಂದು ಹಜ್ ಮಾಡಲು ಕೇರಳದಿಂದ ಸೌದಿ ಅರೇಬಿಯಾಕ್ಕೆ ಮ್ಯಾರಥಾನ್ ನಡಿಗೆಯನ್ನು ಪ್ರಾರಂಭಿಸಿ ಅವರು ಈ ತಿಂಗಳು ಮಕ್ಕಾ ತಲುಪಿದ್ದಾರೆ.
ಶಿಹಾಬ್ ಕಾಲ್ನಡಿಗೆಯಲ್ಲಿ ಭಾರತ, ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ಮೂಲಕ ಪ್ರಯಾಣಿಸಿ ಮೇ ಎರಡನೇ ವಾರದಲ್ಲಿ ಕುವೈತ್ ನಿಂದ ಸೌದಿ ಅರೇಬಿಯಾದ ಗಡಿಯನ್ನು ದಾಟಿದರು.
ಸೌದಿ ಅರೇಬಿಯಾವನ್ನು ಪ್ರವೇಶಿಸಿದ ನಂತರ ಶಿಹಾಬ್ ಪ್ರಮುಖ ಇಸ್ಲಾಮಿಕ್ ಯಾತ್ರಾ ಸ್ಥಳವಾದ ಮದೀನಾಕ್ಕೆ ಹೋದರು. ಮಕ್ಕಾಗೆ ತೆರಳುವ ಮೊದಲು ಅವರು ಮದೀನಾದಲ್ಲಿ 21 ದಿನಗಳನ್ನು ಕಳೆದಿದ್ದರು.
ಶಿಹಾಬ್ ಮದೀನಾ ಮತ್ತು ಮಕ್ಕಾ ನಡುವಿನ 440 ಕಿ.ಮೀ ದೂರವನ್ನು ಕೇವಲ ಒಂಬತ್ತು ದಿನಗಳಲ್ಲಿ ಕ್ರಮಿಸಿದ್ದಾರೆ. ಶಿಹಾಬ್ ತನ್ನ ತಾಯಿ ಝೈನಾಬಾ ಜೊತೆಗೆ ಹಜ್ ಮಾಡಲಿದ್ದು ಅವರು ಕೇರಳದಿಂದ ನೇರವಾಗಿ ಮೆಕ್ಕಾಗೆ ಆಗಮಿಸಿದ ನಂತರ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ.
ಇನ್ನು ತನ್ನದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಶಿಹಾಬ್, ಕೇರಳದಿಂದ ಪವಿತ್ರ ನಗರ ಮಕ್ಕಾ ಪ್ರಯಾಣದ ಕುರಿತು ತನ್ನ ವೀಕ್ಷಕರಿಗೆ ನಿಯಮಿತವಾಗಿ ಅಪ್ಡೇಟ್ ನೀಡುತ್ತಿದ್ದರು.
ಕಳೆದ ವರ್ಷ ಜೂನ್ ನಲ್ಲಿ ತನ್ನ ಹಜ್ ಪ್ರಯಾಣವನ್ನು ಪ್ರಾರಂಭಿಸಿದ ನಂತರ ಶಿಹಾಬ್ ವಾಘಾ ಗಡಿಯನ್ನು ತಲುಪುವ ಮೊದಲು ದೇಶದ ಹಲವಾರು ರಾಜ್ಯಗಳ ಮೂಲಕ ನಡೆದುಕೊಂಡು ಹೋಗಿದ್ದರು. ಈ ಮೂಲಕ ಅವರು ಪಾಕಿಸ್ತಾನವನ್ನು ಪ್ರವೇಶಿಸಲು ಬಯಸಿದ್ದರು.
ಆದರೆ ಇಲ್ಲಿ ವೀಸಾ ಇಲ್ಲದ ಕಾರಣ ಪಾಕಿಸ್ತಾನದ ವಲಸೆ ಅಧಿಕಾರಿಗಳು ಅವರನ್ನು ತಡೆದಿದ್ದರಿಂದ ಅವರು ಮೊದಲ ಅಡೆತಡೆಯನ್ನು ಎದುರಿಸಿದರು.
ಹೀಗಾಗಿ ಟ್ರಾನ್ಸಿಟ್ ವೀಸಾ ಪಡೆಯಲು ಅವರು ವಾಘಾದ ಶಾಲೆಯಲ್ಲಿ ತಿಂಗಳುಗಟ್ಟಲೆ ಕಾಯಬೇಕಾಯಿತು. ಅಂತಿಮವಾಗಿ, 2023 ರ ಫೆಬ್ರವರಿಯಲ್ಲಿ ಶಿಹಾಬ್ ಟ್ರಾನ್ಸಿಟ್ ವೀಸಾವನ್ನು ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಅವರು ಪಾಕಿಸ್ತಾನವನ್ನು ಪ್ರವೇಶಿಸಿದರು. ಅಲ್ಲಿ ಸ್ವಲ್ಪ ವಿರಾಮದ ನಂತರ ಸೌದಿ ಅರೇಬಿಯಾಕ್ಕೆ ಅವರ ಪ್ರಯಾಣ ಪುನರಾರಂಭವಾಯಿತು. ನಾಲ್ಕು ತಿಂಗಳ ನಂತರ ಶಿಹಾಬ್ ಚೊಟ್ಟೂರ್ ಅವರು ತನ್ನ ಕನಸಿನ ಪವಿತ್ರ ಸ್ಥಳವನ್ನು ಮುಟ್ಟಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw