ಶೇ.88 ರಷ್ಟು 2,000 ನೋಟುಗಳು ಬ್ಯಾಂಕ್ ಗೆ ವಾಪಸ್ ಆಗಿದೆ ಎಂದ ಆರ್ ಬಿಐ

ಮೇ ತಿಂಗಳಲ್ಲಿ 2,000 ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ 3.14 ಲಕ್ಷ ಕೋಟಿ ಮೌಲ್ಯದ ಶೇಕಡಾ 88 ರಷ್ಟು 2,000 ನೋಟುಗಳು ಬ್ಯಾಂಕ್ ಗಳಿಗೆ ವಾಪಸ್ಸಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ತಿಳಿಸಿದೆ.
ನಿನ್ನೆಯವರೆಗೂ ಚಲಾವಣೆಯಿಂದ ಮರಳಿ ಪಡೆದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯ 3.14 ಲಕ್ಷ ಕೋಟಿ ರೂಪಾಯಿ ಎಂದು ಆರ್ ಬಿಐ ಹೇಳಿದೆ. ಮೇ 19 ರಿಂದ ಈ ನೋಟುಗಳನ್ನು ಹಿಂಪಡೆಯಲಾಗುತ್ತಿದ್ದು, ನಿನ್ನೆ ಬ್ಯಾಂಕ್ ವ್ಯವಹಾರ ಮುಕ್ತಾಯದ ವೇಳೆ ಶೇಕಡಾ 88 ರಷ್ಟು ನೋಟುಗಳನ್ನು ಹಿಂಪಡೆಯಲಾಗಿದೆ.
ಈ ನೋಟುಗಳ ಪೈಕಿ ಶೇ. 87ರಷ್ಟು ಠೇವಣಿ ರೂಪದಲ್ಲಿ ಬಂದಿದ್ದು, ಉಳಿದ ಶೇ 13ರಷ್ಟು ಹಣವನ್ನು ಇತರೆ ಮುಖಬೆಲೆಯ ನೋಟುಗಳಿಗೆ ಬದಲಾಯಿಸಲಾಗಿದೆ.
ಈ ನೋಟುಗಳ ವಿನಿಮಯ ಅಥವಾ ಠೇವಣಿ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಅದಕ್ಕೂ ಮುಂಚಿತವಾಗಿ ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ರಿಸರ್ವ್ ಬ್ಯಾಂಕ್ ಹೇಳಿಕೆ ನೀಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw