9 ವರ್ಷದಿಂದ ಪ್ರೀತಿಸಿದವಳು ಮೋಸ ಮಾಡಿದಳು: ಆತ್ಮಹತ್ಯೆಗೆ ಶರಣಾದ ಯುವಕ - Mahanayaka
10:52 PM Wednesday 11 - December 2024

9 ವರ್ಷದಿಂದ ಪ್ರೀತಿಸಿದವಳು ಮೋಸ ಮಾಡಿದಳು: ಆತ್ಮಹತ್ಯೆಗೆ ಶರಣಾದ ಯುವಕ

chethan
31/05/2022

ಚಿಕ್ಕಮಗಳೂರು: ಪ್ರೀತಿಸಿದ ಹುಡುಗಿ ಕೈಕೊಟ್ಟು ಮದುವೆಗೆ ನಿರಾಕರಿಸಿದ ಹಿನ್ನೆಲೆ ಪ್ರಿಯಕರ ಚೇತನ್ ಎಂಬಾತ ನೇಣಿಗೆ ಶರಣಾಗಿರುವ  ಘಟನೆ ಎನ್.ಆರ್. ಪುರ ತಾಲೂಕಿನ ಮುತ್ತಿನಕೊಪ್ಪ ಬಳಿಯ ಶಂಕರಪುರದಲ್ಲಿ ನಡೆದಿದೆ.

ಚೇತನ್ (31)  ಆತ್ಮಹತ್ಯೆಗೆ ಶರಣಾಗಿರುವ ಯುವಕನಾಗಿದ್ದು,  ಆತ್ಮಹತ್ಯೆಗೂ ಮುನ್ನ, ನನಗೆ ಗಾನವಿ ಮೋಸ ಮಾಡಿದಳು ಎಂದು ತನ್ನ ಸಂಬಂಧಿಕರಿಗೆ  ವಾಯ್ಸ್ ಮೆಸೇಜ್ ಕಳುಹಿಸಿದ್ದು, ನಾನು ಗಾನವಿ ಒಂಬತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೀವಿ, ನನ್ನಿಂದ ಗಾನವಿ ನಾಲ್ಕು ಲಕ್ಷ ಹಣವನ್ನು ಕಿತ್ತುಕೊಂಡಿದ್ದಾಳೆ ಎಂದು  ಚೇತನ್ ಆರೋಪಿಸಿದ್ದಾನೆ.

ನನ್ನ ಸಾವಿಗೆ ನ್ಯಾಯ ಸಿಗಬೇಕೆಂದರೆ ಆಕೆಗೆ ಶಿಕ್ಷೆಯಾಗಬೇಕು, ನನ್ನ ಚಿತೆಗೆ ಗಾನವಿ ಬೆಂಕಿ ಇಡಬೇಕು, ಆಕೆ ಬರುವತನಕ ಹೆಣವನ್ನು ಕೆಳಗಿಳಿಸಬೇಡಿ. ನನಗೆ ಮಾನಸಿಕ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಚೇತನ್ ತನ್ನ ಡೆತ್ ನೋಟ್ ನಲ್ಲಿ ಬರೆದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ  ಪ್ರಕರಣ ದಾಖಲಿಸಿಕೊಂಡ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಆತ್ಮಹತ್ಯೆಯ ನಿರ್ಧಾರಗಳಿಂದ ದೂರವಿರಿ. ಮನಸ್ಸು ನಿಯಂತ್ರಿಸಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ನೀವಿದ್ದರೆ, 9152987821 ಸಂಖ್ಯೆಗೆ ಕರೆ ಮಾಡಿ ತಜ್ಞರ ಸಲಹೆ ಪಡೆಯಿರಿ

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಾರ್ದಿಕ್ ಪಟೇಲ್ ಬಿಜೆಪಿಗೆ ಸೇರ್ಪಡೆ

ಆರ್ಯನ್ ಖಾನ್ ಪ್ರಕರಣದ ವಿವಾದಿತ ಅಧಿಕಾರಿ ಸಮೀರ್ ವಾಂಖೆಡೆ ವರ್ಗಾವಣೆಯಾಗಿದ್ದೆಲ್ಲಿಗೆ?

ಹಣ ನೀಡಿ ನಿಮ್ಮನ್ನು ಸಚಿವರಾಗಿ ಮಾಡ್ತೇವೆ ಅಂದಿದ್ರು: ಹೊಸ ಬಾಂಬ್ ಸಿಡಿಸಿದ ರೇಣುಕಾಚಾರ್ಯ

ಹಣ ನೀಡಿ ನಿಮ್ಮನ್ನು ಸಚಿವರಾಗಿ ಮಾಡ್ತೇವೆ ಅಂದಿದ್ರು: ಹೊಸ ಬಾಂಬ್ ಸಿಡಿಸಿದ ರೇಣುಕಾಚಾರ್ಯ

ಇತ್ತೀಚಿನ ಸುದ್ದಿ