ಮಾಧ್ಯಮಗಳ ವೈಫಲ್ಯದ ನಡುವೆ ಟಿವಿ ಚಾನೆಲ್ ಆರಂಭಿಸಿದ ಕಾಂಗ್ರೆಸ್
25/04/2021
ನವದೆಹಲಿ: ಆಡಳಿತರೂಢ ಸರ್ಕಾರವನ್ನು ಪ್ರಶ್ನಿಸಲು ದೇಶದ ಪ್ರಮುಖ ಮಾಧ್ಯಮಗಳು ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಐಎಸ್ ಸಿ ಟಿವಿಯನ್ನು ಏಪ್ರಿಲ್ 24ರಂದು ಆರಂಭಿಸಿದೆ.
ಪಕ್ಷದ ಸಂದೇಶಗಳು, ವಿಚಾರಗಳನ್ನು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಅದು ಈ ಚಾನೆಲ್ ಆರಂಭಿಸಲಾಗಿದೆ, ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಸಲುವಾಗಿ ಕಾಂಗ್ರೆಸ್ ಈ ವೇದಿಕೆಯನ್ನು ಬಳಸಿಕೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಸರ್ಕಾರವನ್ನು ಪ್ರಶ್ನಿಸಿ, ಸತ್ಯಾಸತ್ಯತೆ ಮುಂದಿಡಲು ಕಾಂಗ್ರೆಸ್ ತನ್ನ ಐಟಿ ಸೆಲ್ ಬಲಪಡಿಸಿಕೊಂಡಿದ್ದು, 5 ಲಕ್ಷಕ್ಕೂ ಅಧಿಕ ಮಂದಿ ನೇಮಕ ಮಾಡಿಕೊಂಡಿದೆ. ಈ ಮೂಲಕ ಮೋದಿ ಮೀಡಿಯಾಗಳಿಗೆ ಪ್ರತಿರೋಧ ಒಡ್ಡಲು ಕಾಂಗ್ರೆಸ್ ಸಜ್ಜಾಗಿದೆ ಎಂದು ತಿಳಿದು ಬಂದಿದೆ.