ಬಿರುಗಾಳಿಗೆ ಹಾರಿದ ಛಾವಣಿ ಜೋಳಿಗೆಯಲ್ಲಿ ಮಲಗಿದ್ದ ಮಗು ಸಾವು!
28/04/2021
ವಿಜಯಪುರ: ಭಾರೀ ಗಾಳಿ ಮಳೆಯ ಪರಿಣಾಮ ಮನೆಯೊಂದರ ಛಾವಣಿ ಹಾರಿ ಹೋಗಿದ್ದು, ಈ ವೇಳೆ ಜೋಳಿಗೆಯಲ್ಲಿ ಮಲಗಿದ್ದ ಪುಟ್ಟ ಮಗುವೊಂದು ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿಯ ನಿವಾಸಿಯಾಗಿರುವ ಅಬ್ದುಲ್ ರಹ್ಮಾನ್ ಅವರ 8 ತಿಂಗಳ ಮಗು ಮೃತಪಟ್ಟ ಮಗುವಾಗಿದೆ ಎಂದು ತಿಳಿದು ಬಂದಿದೆ.
ಛಾವಣಿಗೆ ಕಂಬಗಳನ್ನು ಬಳಸಿ ಜೋಳಿಗೆಯನ್ನು ಕಟ್ಟಲಾಗಿತ್ತು. ವೇಗವಾಗಿ ಬಿರುಗಾಳಿ ಬೀಸಿದ ಪರಿಣಾಮ ಛಾವಣಿ ಹಾರಿಹೋಗಿದ್ದು, ಛಾವಣಿ ಬಿದ್ದ ವೇಳೆ ಸಮೀಪದ ವಿದ್ಯುತ್ ಕಂಬಕ್ಕೆ ಮಗು ಅಪ್ಪಳಿಸಿದೆ ಎಂದು ತಿಳಿದು ಬಂದಿದ್ದು, ಮಗು ಮೃತಪಟ್ಟಿದೆ.