ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಕೊರೊನಾಕ್ಕೆ ಬಲಿ!
ವಡೋದರ: ದೇಶದ ಜನತೆಗೆ ಕೊರೊನಾ ವೈರಸ್ ಶಾಕ್ ನ ಮೇಲೆ ಶಾಕ್ ನೀಡುತ್ತಿದೆ. ಭಾರತದ ಅಂತಾರಾಷ್ಟ್ರೀಯ ದೇಹದಾರ್ಡ್ಯ ಪಟುವನ್ನು ಇದೀಗ ಕೊರೊನಾ ವೈರಸ್ ಬಲಿ ಪಡೆದಿದ್ದು, 34 ವರ್ಷ ವಯಸ್ಸಿನ ದೃಡಾಕಾಯರಾಗಿದ್ದ ಜಗದೀಶ್ ಲಾಡ್ ಅವರನ್ನು ಕೊರೊನಾ ಬಲಿ ಪಡೆದಿದೆ.
ಗುಜರಾತ್ ನ ವಡೋದರದಲ್ಲಿ ವಾಸಿವಿದ್ದ ಜಗದೀಶ್ ಲಾಡ್ ಅವರಿಗೆ 5 ದಿನಗಳ ಹಿಂದೆಯಷ್ಟೇ ಕೊರೊನಾ ಪಾಸಿಟಿವ್ ಬಂದಿತ್ತು. ಬಾಡಿ ಬಿಲ್ಡರ್ ಆಗಿದ್ದ ಇವರಲ್ಲಿ ಅತ್ಯಧಿಕ ಪ್ರತಿರೋಧ ಶಕ್ತಿ ಇರುತ್ತದೆ. ಇವರು ಕೊರೊನಾದಿಂದ ಚೇತರಿಸಿಕೊಳ್ಳುತ್ತಾರೆ ಎಂದೇ ಎಲ್ಲದರೂ ಅಂದುಕೊಂಡಿದ್ದರು. ಆದರೆ ಇಷ್ಟೊಂದು ಶಕ್ತಿಯುವಾಗಿರುವ ಪಟುವನ್ನೇ ಕೊರೊನಾ ಬಲಿ ಪಡೆದಿದ್ದರಿಂದ ಜನರು ದಿಗ್ಬ್ರಾಂತರಾಗಿದ್ದಾರೆ.
ಜಗದೀಶ್ ಲಾಡ್ ಅವರು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಪದಕ, ಮಿಸ್ಟರ್ ಇಂಡಿಯಾದಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು. ಇವರ ನಿಧನದಿಂದ ಇವರ ಗೆಳೆಯ ಬಳಗ, ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಸೂಕ್ತ ಚಿಕಿತ್ಸೆ ದೊರಕದ ಕಾರಣ ಜಗದೀಶ್ ಅವರು ಮೃತಪಟ್ಟರು ಎಂದು ಅವರು ಸ್ನೇಹಿತರು ಹೇಳಿದ್ದಾರೆ. ಇಂತಹ ರೋಗ ಯಾರಿಗೂ ಬರಬಾರದು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ, ಜಗದೀಶ್ ಪತ್ನಿಗೂ ಕೊರೊನಾ ಸೋಂಕು ತಗಲಿದೆ ಎಂದು ತಿಳಿದು ಬಂದಿದೆ.
ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪೈಕಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಲಭಿಸದೇ ಮೃತಪಟ್ಟವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಬೆಡ್ ಗಾಗಿ ಕಾದು ಜನರು ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇತ್ತ ಕರ್ನಾಟಕದಲ್ಲಿ ಕೂಡ ಇದು ಮುಂದುವರಿಯುತ್ತಿದ್ದು, ಸರ್ಕಾರ ಹಾಗೂ ಆಸ್ಪತ್ರೆಗಳ ನಡುವೆ ಕಮಿಷನ್ ದಂಧೆ ನಡೆಯುತ್ತಿದೆ ಎನ್ನುವ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.