ಬ್ರೇಕಿಂಗ್ ನ್ಯೂಸ್: ಪ್ರತಿ ಸುತ್ತಿನಲ್ಲೂ ಸತೀಶ್ ಜಾರಕಿಹೊಳಿ ಮುನ್ನಡೆ ಅಂತರ ಇಳಿಕೆ
02/05/2021
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಗೆ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಜಿದ್ದಾಜಿದ್ದಿನ ಕಣವಾಗಿ ಪರಿಣಮಿಸಿದೆ.
ಬೆಳಗಾವಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದಾರೆ. ಆದರೆ ಅವರ ಮುನ್ನಡೆಯಲ್ಲಿ ಏರಳಿತ ಕಂಡು ಬಂದಿದೆ. ಪ್ರತಿ ಸುತ್ತಿನಲ್ಲೂ ಸತೀಶ್ ಜಾರಕಿಹೊಳಿ ಮುನ್ನಡೆ ಅಂತರ ಇಳಿಕೆಯಾಗುತ್ತಿದೆ.
10 ಸಾವಿರ ಮತಗಳ ಅಂತರದಿಂದ 5 ಸಾವಿರ ಮತಗಳವರೆಗೆ ಸತೀಶ್ ಜಾರಕಿಹೊಳಿ ಮುನ್ನಡೆ ಅಂತರ ಕುಸಿತವಾಗಿದೆ. ಸದ್ಯ ಏರಿಳಿಕೆಗಳ ಫಲಿತಾಂಶದಿಂದಾಗಿ ತೀವ್ರ ಕುತೂಹಲದ ಕಣವಾಗಿ ಪರಿಣಮಿಸಿದೆ.
ಇದೀಗ ಬಂದ ಮಾಹಿತಿ: 59ನೇ ಸುತ್ತಿನಲ್ಲಿಯೂ ಸತೀಶ್ ಜಾರಕಿಹೊಳಿ ಮತ್ತೆ 8,971 ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಲಕ್ಷಾಂತರ ಮತಗಳ ಎಣಿಕೆ ಬಾಕಿ ಇದ್ದು, ಸಂಜೆಯೊಳಗೆ ಅಂತಿಮ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.