ಬ್ರೇಕಿಂಗ್ ನ್ಯೂಸ್: ಮತ್ತೆ ಮುನ್ನಡೆ ಸಾಧಿಸಿದ ಮಂಗಳಾ ಅಂಗಡಿ | ಸತೀಶ್ ಜಾರಕಿಹೊಳಿಗೆ ಹಿನ್ನಡೆ
02/05/2021
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಹಲ ಸೃಷ್ಟಿಸಿದ್ದು, ನಿರಂತರವಾಗಿ ಮುನ್ನಡೆ ಸಾಧಿಸಿದ್ದ ಸತೀಶ್ ಜಾರಕಿಹೊಳಿ ಅವರಿಗಿಂತ 3530 ಮತಗಳ ಮುನ್ನಡೆಯನ್ನು ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ ಸಾಧಿಸಿದ್ದಾರೆ.
84ನೇ ಸುತ್ತಿನಲ್ಲಿ ಬಿಜೆಪಿ ಮಂಗಳಾ ಅಂಗಡಿ ಮುನ್ನಡೆ ಸಾಧಿಸಿದ್ದಾರೆ. 24ನೇ ಸುತ್ತಿನಿಂದ ಸತತ ಮುನ್ನಡೆ ಸಾಧಿಸಿದ್ದ ಸತೀಶ್ ಜಾರಕಿಹೊಳಿ ಇದೀಗ ಹಿನ್ನಡೆ ಸಾಧಿಸಿದ್ದಾರೆ.
ಕೊನೆಯ ಕ್ಷಣದಲ್ಲಿ ಫಲಿತಾಂಶ ತಲೆ ಕೆಳಗಾಗುತ್ತಾ? ಎನ್ನುವ ಕುತೂಹಲ ಮತದಾರರಲ್ಲಿ ಮೂಡಿದೆ. ಬೆಳಗಾವಿ ಸತೀಶ್ ಜಾರಕಿಹೊಳಿಯ ಕೈ ತಪ್ಪಿತೇ? ಎನ್ನುವ ಅನುಮಾನಗಳಿಗೂ ಕಾರಣವಾಗಿದೆ. ಕೆಲವೇ ಕ್ಷಣಗಳಲ್ಲಿ ಅಂತಿಮ ಫಲಿತಾಂಶ ಹೊರಬೀಳಲಿದೆ.