ಕೊರೊನಾದಿಂದ ಪುತ್ರ ಸಾವು | ಸುದ್ದಿ ತಿಳಿದು ಆಘಾತಗೊಂಡ ತಂದೆ-ತಾಯಿಯೂ ಸಾವು - Mahanayaka
3:48 AM Wednesday 11 - December 2024

ಕೊರೊನಾದಿಂದ ಪುತ್ರ ಸಾವು | ಸುದ್ದಿ ತಿಳಿದು ಆಘಾತಗೊಂಡ ತಂದೆ-ತಾಯಿಯೂ ಸಾವು

kemachari and wife
04/05/2021

ಮಂಡ್ಯ:  ಕೊವಿಡ್ ಗೆ ಮಗ ಬಲಿಯಾದ ಸುದ್ದಿ ಕೇಳಿ ಆಘಾತದಿಂದ ತಂದೆ ಹಾಗೂ ತಾಯಿ ಕೂಡ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ನಡೆದಿದೆ.

ಮೂರು ದಿನಗಳ ಹಿಂದೆ ಮಗ ತಮ್ಮಯ್ಯಾಚಾರಿಯ ಕೊವಿಡ್ ಗೆ ಬಲಿಯಾಗಿದ್ದರು. ಆದರೆ ಈ ವಿಚಾರವನ್ನು ಕುಟುಂಬಸ್ಥರು ತಂದೆ-ತಾಯಿಯಿಂದ ಮುಚ್ಚಿಟ್ಟಿದ್ದರು. ಆದರೆ ನಿನ್ನೆ ಯಾರೋ ಸಂಬಂಧಿಕರು ಈ ವಿಚಾರವನ್ನು ತಂದೆ-ತಾಯಿಗೆ ತಿಳಿಸಿದ್ದಾರೆ.

ಮಗನ ಸಾವಿನ ಸುದ್ದಿ ಕೇಳಿದ  74 ವರ್ಷ ವಯಸ್ಸಿನ ತಾಯಿ ಜಯಮ್ಮ ಮೊದಲು ಆಘಾತದಿಂದ ಮರಣ ಹೊಂದಿದ್ದು, ಕೆಲವೇ ನಿಮಿಷಗಳಲ್ಲಿ ಇವರ ಪತಿ 84 ವರ್ಷ ವಯಸ್ಸಿನ ಕೆಂಪಚಾರಿ ಕೂಡ ಸಾವನ್ನಪ್ಪಿದ್ದಾರೆ.

ಇತ್ತೀಚಿನ ಸುದ್ದಿ