ಕೊವಿಡ್ ವಾರ್ ರೂಮ್ ಗೆ ದಾಳಿ ಬಿಜೆಪಿಯ “ಹಾಸಿಗೆ-ಹೇಸಿಗೆ” ಪಟಾಲಂನ ಮಹಾನಾಟಕ | ಕಾಂಗ್ರೆಸ್ - Mahanayaka
8:07 AM Thursday 12 - December 2024

ಕೊವಿಡ್ ವಾರ್ ರೂಮ್ ಗೆ ದಾಳಿ ಬಿಜೆಪಿಯ “ಹಾಸಿಗೆ-ಹೇಸಿಗೆ” ಪಟಾಲಂನ ಮಹಾನಾಟಕ | ಕಾಂಗ್ರೆಸ್

kpcc
07/05/2021

ಬೆಂಗಳೂರು: ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಶಾಸಕರು ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲು ಮಾಡಿದ್ದಾರೆ ಎನ್ನಲಾಗಿರುವ ಘಟನೆಯನ್ನು ಕಾಂಗ್ರೆಸ್ ತಳ್ಳಿ ಹಾಕಿದ್ದು, ಬಿಜೆಪಿಯ ಹಾಸಿಗೆ-ಹೇಸಿಗೆ ಪಟಾಲಂ ನಡೆಸಿದ ಮಹಾ ನಾಟಕ ಇದು ಎಂದು ಆರೋಪಿಸಿದೆ.

ಬಿಜೆಪಿಯ “ಹಾಸಿಗೆ-ಹೇಸಿಗೆ” ಪಟಾಲಂ ಮೊನ್ನೆ ನಡೆಸಿದ ಮಹಾ ನಾಟಕದ ದೃಶ್ಯಗಳು ಒಂದೊಂದಾಗಿಯೇ ಬಯಲಾಗುತ್ತಿವೆ. ಅದು ಹಗರಣ ಬಯಲಿಗೆಳೆದಿದ್ದಲ್ಲ ಬದಲಿಗೆ ಅಧಿಕಾರಿಗಳು ಹಗರಣಕ್ಕೆ ಕಡಿವಾಣ ಹಾಕಿ ತನಿಖೆಗೆ ಅದೇಶಿಸಿದ್ದನ್ನು ಸಹಿಸದೆ ನಡೆಸಿದ ದಾಂಧಲೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.

ಲಸಿಕೆ ನೋಂದಣಿ ಬಂದ್ ಆಗಿದೆ. ರಾಜ್ಯದಲ್ಲಿ 18+ ನವರ ಲಸಿಕೆ ನೋಂದಣಿಯನ್ನು ನಿರಾಕರಿಸಲಾಗಿದೆ.. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಸಿದಂತೆ ಲಸಿಕೆ ತರಿಸದೆಯೇ ಅಬ್ಬರದ ಪ್ರಚಾರ ಮಾಡಿದ ಸರ್ಕಾರ ಈಗ ನಾಡಿದ ಜನತೆಗೆ ದ್ರೋಹ ಎಸಗಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಅಸಾಮರ್ಥ್ಯದ ಪ್ರತೀಕವಿದು ಎಂದು ಕಿಡಿಕಾರಿದೆ.

ಇತ್ತೀಚಿನ ಸುದ್ದಿ