ಕೊವಿಡ್ ಲಸಿಕೆ ಎರಡನೇ ಡೋಸ್ ಪಡೆದರೂ ಖ್ಯಾತ ಸರ್ಜನ್ ಕೊರೊನಾಕ್ಕೆ ಬಲಿ - Mahanayaka
9:06 PM Thursday 12 - December 2024

ಕೊವಿಡ್ ಲಸಿಕೆ ಎರಡನೇ ಡೋಸ್ ಪಡೆದರೂ ಖ್ಯಾತ ಸರ್ಜನ್ ಕೊರೊನಾಕ್ಕೆ ಬಲಿ

anil kumar rawat
09/05/2021

ನವದೆಹಲಿ: ಕೊರೊನಾ ವೈರಸ್ ಗೆ ದೇಶಾದ್ಯಂತ ಲಸಿಕೆ ವಿತರಿಸಲಾಗುತ್ತಿದೆ. ಈ ನಡುವೆ  ಎರಡನೇ ಡೋಸ್ ಹಾಕಿಕೊಂಡವರಲ್ಲಿಯೂ ಕೊರೊನಾ ಪಾಸಿಟಿವ್ ಬರುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಈ ಆರೋಪಗಳ ಬೆನ್ನಲ್ಲೇ, ಎರಡನೇ ಲಸಿಕೆ ಪಡೆದ ಖ್ಯಾತ ಸರ್ಜನ್ ಒಬ್ಬರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಡಾ. ಅನಿಲ್ ಕುಮಾರ್ ಮೃತಪಟ್ಟವರಾಗಿದ್ದು,  ದೆಹಲಿಯ ಸರೋಜ್ ಆಸ್ಪತ್ರೆಯಲ್ಲಿ ಇವರು ಕಳೆದ ಮಾರ್ಚ್ ನಲ್ಲಿ ಎರಡನೇ ಡೋಸ್ ಪಡೆದುಕೊಂಡಿದ್ದರು.  ಆದರೆ ಅವರಿಗೆ ಆ ಬಳಿಕವೂ  ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ ಅನಿಲ್ ಕುಮಾರ್ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಎರಡನೇ ಡೋಸ್ ಪಡೆದರೂ ಕೊರೊನಾ ವೈರಸ್ ಗೆ ಅವರು ಬಲಿ ಪಡೆದುಕೊಂಡಿದೆ ಎಂದು ಸರೋಜ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಪಿ.ಕೆ. ಭಾರದ್ವಾಜ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ