ಗಂಗಾ ತೀರದಲ್ಲಿ ರಾಶಿ-ರಾಶಿ ಮೃತದೇಹಗಳು - Mahanayaka
10:29 AM Thursday 12 - December 2024

ಗಂಗಾ ತೀರದಲ್ಲಿ ರಾಶಿ-ರಾಶಿ ಮೃತದೇಹಗಳು

ganga
11/05/2021

ಉತ್ತರಪ್ರದೇಶ: ಗಂಗಾ ತೀರದಲ್ಲಿ ಮೃತ ದೇಹಗಳು ಇಂದು ಕೂಡ ಪತ್ತೆಯಾಗಿದೆ. ಉತ್ತರ ಪ್ರದೇಶದ ಘಾಜಿಪುರದಲ್ಲಿ ಮೃತದೇಹಗಳು ಪತ್ತೆಯಾಗಿದೆ.

ನಿನ್ನೆ ರಾಶಿ-ರಾಶಿ ಮೃತದೇಹಗಳು ಪತ್ತೆಯಾದ ಬಿಹಾರದ ಬಕ್ಸಾರ್‌ನಿಂದ ಸುಮಾರು 55 ಕಿ.ಮೀ ದೂರದಲ್ಲಿ ಇಂದು ಮೃತದೇಹಗಳು ಪತ್ತೆಯಾಗಿದೆ. ಶವಗಳು ಉತ್ತರ ಪ್ರದೇಶದಿಂದ ಬಂದಿದೆ ಎಂದು ನಿನ್ನೆ ಬಿಹಾರದ ಅಧಿಕಾರಿಗಳು ಹೇಳಿದ್ದರು.

ಕೋವಿಡ್ ಉತ್ತರ ಭಾರತದ ಗ್ರಾಮೀಣ ಭಾಗಗಳಲ್ಲಿ ವೇಗವಾಗಿ ಹರಡುತ್ತಿರುವುದರಿಂದ, ನದಿಯಲ್ಲಿರುವ ಶವಗಳು ಕೋವಿಡ್ ರೋಗಿಗಳದೆಂದು ಶಂಕಿಸಲಾಗಿದೆ. ಗ್ರಾಮೀಣ ಶವಾಗಾರಗಳಲ್ಲಿ ಯಾವುದೇ ಕೋವಿಡ್ ಪ್ರೋಟೋಕಾಲ್ ಗಳ ವ್ಯವಸ್ಥೆ ಇಲ್ಲ. ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಇಲ್ಲ. ಇದರಿಂದ ಗ್ರಾಮೀಣ ಜನ ಮೃತದೇಹಗಳನ್ನು ನದಿಗೆ ಎಸೆಯುತ್ತಿದ್ದಾರೆ.

ಇದರಿಂದಾಗಿ ಸ್ಥಳೀಯರು ಸೋಂಕು ಮತ್ತಷ್ಟು ಹರಡಬಹುದೆಂಬ ಭಯದಲ್ಲಿದ್ದಾರೆ. ನೀರಿನ ಮಾಲಿನ್ಯವು ರೋಗದ ಶೀಘ್ರ ಹರಡುವಿಕೆಗೆ ಕಾರಣವಾಗಬಹುದು. ಜೊತೆಗೆ ಬೇರೆ ರೋಗಗಳಿಗೂ ಕಾರಣವಾಗಬಹುದು ಎಂಬ ಸ್ಥಳೀಯರ ಭಯದ ಮಧ್ಯೆ, ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ