ಲಾಕ್ ಡೌನ್ ನಿಂದ ಮತ್ತೆ ಭಾರೀ ಪ್ರಮಾಣಕ್ಕೆ ಏರಿಕೆಯಾದ ನಿರುದ್ಯೋಗ ಸಮಸ್ಯೆ
13/05/2021
ನವದೆಹಲಿ: ಕೊವಿಡ್ 19 ಎರಡನೇ ಅಲೆ ಸಂದರ್ಭದಲ್ಲಿ ದೇಶದಲ್ಲಿ ನಿರುದ್ಯೋಗಿಗಳ ಪ್ರಮಾಣ ಮತ್ತೆ ಹೆಚ್ಚಳವಾಗಿದ್ದು, ಮಾರ್ಚ್ ನಲ್ಲಿ 6.5ರಷ್ಟಿದ್ದ ನಿರುದ್ಯೋಗ ಪ್ರಮಾಣ ಎಪ್ರಿಲ್ ನಲ್ಲಿ ಶೇ.8ಕ್ಕೆ ಏರಿಕೆಯಾಗಿದೆ.
ಕೊವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಲಾಕ್ ಡೌನ್ ನಿರುದ್ಯೋಗದ ಪ್ರಮಾಣ ಏರಿಕೆಗೆ ಕಾರಣವಾಗಿದೆ ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರದ ಸಿಇಒ ಮಹೇಶ್ ವ್ಯಾಸ್ ಹೇಳಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಉದ್ಯೋಗ ಹುಡುಕಲು ಸಾಧ್ಯವಾಗಿಲ್ಲ. ಅಥವಾ ಉದ್ಯೋಗ ಒದಗಿಸಲು ಸಾಧ್ಯವಾಗಿಲ್ಲ. ಉದ್ಯೋಗ ಸೃಷ್ಟಿಗೆ ಆರ್ಥಿಕತೆಯ ಕುಸಿತವೂ ಕಾರಣವಾಗಿರಬಹುದು ಎಂದು ವ್ಯಾಸ್ ಹೇಳಿದ್ದಾರೆ.