ಆಟೋ ಚಾಲಕರಿಗೆ ಉದ್ಯಮಿ ಜೋನ್ ಕೆನ್ಯೂಟ್ ಅವರಿಂದ ಆಹಾರ ಸಾಮಗ್ರಿ ವಿತರಣೆ
14/05/2021
ನೆಕ್ಕಿಲಾಡಿ: ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ಉದ್ಯಮಿ ಜೋನ್ ಕೆನ್ಯೂಟ್ ನೆಕ್ಕಿಲಾಡಿ ಆಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದರು.
ನೆಕ್ಕಿಲಾಡಿಯ 34ನೇ ಗ್ರಾಮ ವ್ಯಾಪ್ತಿಯ ಆಟೋ ಚಾಲಕರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಲಾಕ್ ಡೌನ್ ನಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವ ಜನರ ಪೈಕಿ ಆಟೋ ಚಾಲಕರೂ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯಮಿ ಜೋನ್ ಕೆನ್ಯೂಟ್ ನೆಕ್ಕಿಲಾಡಿ ಅವರು ಆಟೋ ಚಾಲಕರ ಕುಟುಂಬಗಳಿಗೆ ನೆರವು ನೀಡಿದ್ದಾರೆ.
ಇವರ ಕಾರ್ಯಕ್ಕೆ ಸಾಮಾಜಿಕ ಕಾರ್ಯಕರ್ತರಾದ ಪ್ರಕಾಶ್ ಗೌಡ, ಪ್ರಹ್ಲಾದ್ ಬಿ., ಕಿರಣ್, ಲಕ್ಷ್ಮೀಶ ಸಹಕಾರ ನೀಡಿದರು.