ಹಿರಿಯ ದಲಿತ ಮುಖಂಡರನ್ನು ಕಾಲಿಗೆ ಬೀಳಿಸಿಕೊಂಡ ಪಂಚಾಯತ್ ಸದಸ್ಯರು
ತಮಿಳುನಾಡು: ಮೂವರು ಹಿರಿಯ ದಲಿತ ಮುಖಂಡರಿಗೆ ಪಂಚಾಯತ್ ಸದಸ್ಯರು ತಮ್ಮ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಘಟನೆ ತಮಿಳುನಾಡಿನ ವಿಲ್ಲುಪುರ ಜಿಲ್ಲೆಯಲ್ಲಿ ನಡೆದಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮಿಳುನಾಡಿನ ವಿಲ್ಲುಪುರ ಜಿಲ್ಲೆಯಲ್ಲಿ ನ್ಯಾಯ ಪಂಚಾಯಿತಿ ವ್ಯವಸ್ಥೆಯು ಸಂವಿಧಾನ ಬಾಹಿರವಾಗಿ ನಡೆಯುತ್ತಿದ್ದು, ಜಿಲ್ಲೆಯ ಒಟ್ಟಾಂನೇಂಧಲ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕೊವಿಡ್ ಲಾಕ್ ಡೌನ್ ನಡುವೆಯೂ ನಿಯಮ ಉಲ್ಲಂಘಿಸಿ ಒಟ್ಟಾಂನೇಂಧಲ್ ಗ್ರಾಮದಲ್ಲಿ ದೇವರ ಉತ್ಸವ ನಡೆಸಲಾಗಿತ್ತು. ಈ ವೇಳೆ ಹಳ್ಳಿಗೆ ಪೊಲೀಸರು ಬಂದಿದ್ದು, ಉತ್ಸವವನ್ನು ನಿಲ್ಲಿಸಿದ್ದರು. ಉತ್ಸವ ನಿಲ್ಲಿಸಲು ದಲಿತರೇ ಕಾರಣರಾಗಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೇಲ್ವರ್ಗದ ಗುಂಪು ಗಲಾಟೆ ನಡೆಸಿದೆ ಎಂದು ಹೇಳಲಾಗಿದೆ.
ಈ ವಿಚಾರವಾಗಿ ಮೂವರು ಹಿರಿಯ ದಲಿತರನ್ನು ಪಂಚಾಯತ್ ಸದಸ್ಯರು ಕಾಲಿಗೆ ಬೀಳಿಸಿಕೊಂಡು ಕ್ಷಮೆ ಕೇಳಿಸಿದ್ದಾರೆ. ಈ ಚಿತ್ರ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.