ಮಾಸ್ಕ್ ಧರಿಸದೇ ನಡು ರಸ್ತೆಯಲ್ಲಿ ಪೊಲೀಸರೊಂದಿಗೆ ಬಿಜೆಪಿ ಕಾರ್ಯಕರ್ತರ ವಾಗ್ವಾದ - Mahanayaka
1:33 PM Thursday 12 - December 2024

ಮಾಸ್ಕ್ ಧರಿಸದೇ ನಡು ರಸ್ತೆಯಲ್ಲಿ ಪೊಲೀಸರೊಂದಿಗೆ ಬಿಜೆಪಿ ಕಾರ್ಯಕರ್ತರ ವಾಗ್ವಾದ

madhyapradesh bjp
16/05/2021

ಮಧ್ಯಪ್ರದೇಶ: ಮಾಸ್ಕ್ ಧರಿಸದೇ ರಾಜಾರೋಷವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಮೂವರು ಬಿಜೆಪಿ ಕಾರ್ಯಕರ್ತರನ್ನು ತಡೆದು ಪೊಲೀಸರು ಪ್ರಶ್ನಿಸಿದ್ದು, ಈ ವೇಳೆ ಪೊಲೀಸರಿಗೆ ಬೈದು ವಾಗ್ವಾದ ಸೃಷ್ಟಿಸಿದ ಘಟನೆ ಮಧ್ಯಪ್ರದೇಶದ ಜಬಲ್ಪುರ ಪಟ್ಟಣದಲ್ಲಿ ನಡೆದಿದೆ.

ಮಧ್ಯಪ್ರದೇಶ ಆಡಳಿತ ಪಕ್ಷದ ಕಾರ್ಯಕರ್ತರಾಗಿರುವ ಬಿಜೆಪಿ ಕಾರ್ಯಕರ್ತರು ಅನಗತ್ಯವಾಗಿ ರಸ್ತೆಗೆ ಇಳಿದಿದ್ದು, ಮಾಸ್ಕ್ ಧರಿಸದೆಯೇ ಉದ್ಧಟತನ ತೋರಿದ್ದಾರೆ. ಇವರ ವರ್ತನೆಯನ್ನು ಗಮನಿಸಿ ಪೊಲೀಸರು ತರಾಟೆಗೆತ್ತಿಕೊಂಡಿದ್ದು, ಈ ವೇಳೆ ರಸ್ತೆಯಲ್ಲಿ ರಾಜಾರೋಷವಾಗಿ ನಿಂತು ಪೊಲೀಸರ ಜೊತೆಗೇ ವಾಗ್ವಾದ ನಡೆಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಪಶ್ಚಿಮ ಬಂಗಾಳ ಬಿಜೆಪಿ ಮಾಧ್ಯಮ ಉಸ್ತುವಾರಿ ರಿಷಭ್ ದಾಸ್, ರಂಜಿತ್ ಠಾಕೂರ್ ಹಾಗೂ ಮಂಡಲ್ ಜನರಲ್ ಪುಷ್ಪರಾಜ್ ಪಾಂಡೆ ಎಂಬವರು ದುರ್ವರ್ತನೆ ತೋರಿದವರಾಗಿದ್ದು, ಆಡಳಿತ ಪಕ್ಷದಲ್ಲಿದ್ದು, ಜನರಿಗೆ ಮಾರ್ಗದರ್ಶನ ನೀಡಬೇಕಾದವರು ಈ ರೀತಿಯ ವರ್ತನೆ ಮಾಡಿರುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸುವಂತಾಗಿದೆ.

ಇತ್ತೀಚಿನ ಸುದ್ದಿ