ಬಿಜೆಪಿಗೆ ಬುದ್ಧಿ ಹೇಳುವ ಕಾಂಗ್ರೆಸಿಗರು ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ?
17/05/2021
ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಕೋಲಾರ ಪ್ರವಾಸ ಕೈಗೊಂಡಿದ್ದು, ಇದೇ ವೇಳೆ ನಾಯಕರಿಬ್ಬರಿಗೆ ಸ್ವಾಗತ ಕೋರಿ ಪಕ್ಷದ ಕಾರ್ಯಕರ್ತರು ಹಾಕಿದ್ದ ಫ್ಲೆಕ್ಸ್ ಗಳು ನಗರದಲ್ಲಿ ರಾರಾಜಿಸುತ್ತಿವೆ.
ಜಿಲ್ಲೆಯ ವಿವಿಧೆಡೆಗಳಲ್ಲಿ ದಿನಸಿ ಕಿಟ್ ಗಳನ್ನು ಹಂಚಿಕೆ ಮಾಡುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಕೋಲಾರಕ್ಕೆ ಆಗಮಿಸಿದ್ದರು. ಈ ವೇಳೆ ಕೆಜಿಎಫ್ , ಬಂಗಾರಪೇಟೆ, ಮಾಲೂರಿನಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗಿದೆ.
ಇನ್ನೂ ಕಾರ್ಯಕ್ರಮದಲ್ಲಿ 200 ಜನರಿಗೆ ಮಾತ್ರವೇ ಅವಕಾಶವನ್ನು ನೀಡಲಾಗಿದೆ. ಆದರೂ ಈ ಫ್ಲೆಕ್ಸ್ ಗಳೆಲ್ಲ ಬೇಕಿತ್ತಾ? ಬಿಜೆಪಿಯವರು ಸ್ಮಶಾನದಲ್ಲಿ ನೀಡುತ್ತಿರುವ ಆಹಾರ ವ್ಯವಸ್ಥೆಯ ಪ್ಲೆಕ್ಸ್ ಹಾಕಿಕೊಂಡು ವಿವಾದಕ್ಕೆ ಕಾರಣವಾಗಿದ್ದರು. ಕಾಂಗ್ರೆಸ್ ಲಾಕ್ ಡೌನ್ ನಡುವೆ ಸ್ವಾಗತ ಫ್ಲೆಕ್ಸ್ ಗಳನ್ನು ಹಾಕುವ ಅಗತ್ಯವಿರಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.