ಕೊರೊನಾದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ! - Mahanayaka
9:00 PM Friday 20 - September 2024

ಕೊರೊನಾದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ!

jagan mohan reddy
18/05/2021

ಅಮರಾವತಿ: ಕೊರೊನಾದಿಂದಾಗಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂಪಾಯಿ ಠೇವಣಿ ಇಡುವಂತೆ  ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಕೊವಿಡ್ 19 ಎರಡನೇ ಅಲೆಯ ಸಂದರ್ಭದಲ್ಲಿ ಹಲವು ಮಕ್ಕಳು ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡು ಅಸುರಕ್ಷಿತ ಸ್ಥಿತಿಯಲ್ಲಿದ್ದಾರೆ. ಈ ಮಕ್ಕಳ ಭವಿಷ್ಯಕ್ಕಾಗಿ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಅನಾಥ ಮಕ್ಕಳ ಹೆಸರಿನಲ್ಲಿ 10 ಲಕ್ಷ ಡೆಪಾಸಿಟಿಟ್ ಮಾಡಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಸರ್ಕಾರ ಠೇವಣಿ ಇಡಲಿದೆ. ಮಕ್ಕಳಿಗೆ 25 ವರ್ಷ ವಯಸ್ಸು ತುಂಬುವವರೆಗೂ ಈ 10 ಲಕ್ಷ ಮೊತ್ತ ಬ್ಯಾಂಕ್ ನಲ್ಲಿಯೇ ಇರುತ್ತದೆ. ಈ ಹಣಕ್ಕೆ ಬರುವ ಬಡ್ಡಿಯನ್ನು ಮಗುವನ್ನು ಸಾಕುವ ಪಾಲಕರಿಗೆ ಸಿಗುವಂತೆ ಮಾಡಬೇಕು. ಮತ್ತು ಆ ಕಾರ್ಯಕ್ಕೆ ಯೋಜನೆ ರೂಪಿಸುವಂತೆ ಬ್ಯಾಂಕ್ ಗಳ ಜೊತೆಗೆ ಮಾತುಕತೆ ನಡೆಸಲು ಸಿಎಂ ಸೂಚಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ