ಸಂಕಷ್ಟದಲ್ಲಿದ್ದ  ಬಡ ಕಾರ್ಮಿಕನಿಗೆ ನೆರವಾದ ಕಿಚ್ಚ ಸುದೀಪ್ - Mahanayaka
6:03 PM Thursday 12 - December 2024

ಸಂಕಷ್ಟದಲ್ಲಿದ್ದ  ಬಡ ಕಾರ್ಮಿಕನಿಗೆ ನೆರವಾದ ಕಿಚ್ಚ ಸುದೀಪ್

kiccha sudeep
19/05/2021

ಪುಣೆ: ಬಡ ಕಾರ್ಮಿಕನ ಕುಟುಂಬಕ್ಕೆ ನಟ ಕಿಚ್ಚ ಸುದೀಪ್ ಅವರು ನೆರವಾಗಿದ್ದು, ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ನಿಂದ ಕೆಲಸವಿಲ್ಲದೇ ದಿನಗೂಲಿ ನೌಕರರು ಪರದಾಡುತ್ತಿದ್ದು, ಇದೇ ಸಂದರ್ಭದಲ್ಲಿ ಅಲ್ಲಿನ ಕಾರ್ಮಿಕರೋರ್ವರು ಸಂಕಷ್ಟದಲ್ಲಿದ್ದರು.

ಪುಣೆಯ ಗುಡ್ಡು ಪಾಲ್ ಎನ್ನುವ ದಿನಗೂಲಿ ಕಾರ್ಮಿಕರೊಬ್ಬರ ಕುಟುಂಬ ಕೆಲಸ ಇಲ್ಲದೇ ಸಂಕಷ್ಟದಲ್ಲಿತ್ತು. ಇದೇ ಸಂದರ್ಭದಲ್ಲಿ ಅವರಿಗೆ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್  ಸೊಸೈಟಿಯ ಬಗ್ಗೆ ಮಾಹಿತಿ ಲಭಿಸಿದ್ದು, ಅವರು ಸೊಸೈಟಿಯನ್ನು ಸಂಪರ್ಕಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್, ಗುಡ್ಡು ಪಾಲ್ ಅವರ ಕುಟುಂಬಕ್ಕೆ ಅಗತ್ಯ ವಸ್ತುಗಳನ್ನು ತಲುಪಿಸಿದೆ. ಸುದೀಪ್ ಅವರ ಕಾರ್ಯಕ್ಕೆ ಗುಡ್ಡು ಪಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದೀಪ್ ಅವರಿಂದ ನಮಗೆ ಬಹಳ ಸಹಾಯವಾಗಿದೆ. ನನ್ನ ಹಾಗೂ ನನ್ನ ಕುಟುಂಬದ ಕಡೆಯಿಂದ ನಿಮಗೆ ಧನ್ಯವಾದಗಳು ಎಂದು ಸುದೀಪ್ ಅವರಿಗೆ ಕಾರ್ಮಿಕ ಗುಡ್ಡು ಪಾಲ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ