ಕಷ್ಟದಲ್ಲಿರುವ ಅರ್ಚಕರಿಗೆ ಸರ್ಕಾರ ಏನೇನು ನೀಡಲಿದೆ ಗೊತ್ತಾ? - Mahanayaka
2:22 AM Wednesday 11 - December 2024

ಕಷ್ಟದಲ್ಲಿರುವ ಅರ್ಚಕರಿಗೆ ಸರ್ಕಾರ ಏನೇನು ನೀಡಲಿದೆ ಗೊತ್ತಾ?

archaka
20/05/2021

ಬೆಂಗಳೂರು: ಲಾಕ್ ಡೌನ್ ನಿಂದ ಭಾರೀ ಕಷ್ಟದಲ್ಲಿರುವ ಅರ್ಚಕರ ರಕ್ಷಣೆಗೆ ಸರ್ಕಾರ ಮುಂದಾಗಿದ್ದು,  ಸಿ ದರ್ಜೆಯ ದೇವಾಲಯಗಳ ಆರ್ಥಿಕ ಸಂಕಷ್ಟದಲ್ಲಿರುವ  ಅರ್ಚಕರಿಗೆ ಮತ್ತು ಸಿಬ್ಬಂದಿಗೆ ಆಹಾರ ಕಿಟ್ ನೀಡಲು ಆದೇಶಿಸಿದೆ.

ರಾಜ್ಯದ ಧಾರ್ಮಾದಾಯ ದತ್ತಿ ಇಲಾಖೆಗೆ ಒಳಪಡುವ ಸಿ ದರ್ಜೆಯ ದೇವಾಲಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅರ್ಚಕರಿಗೆ ಅಕ್ಕಿ ಮತ್ತಿತರ ಧವಸ ಧಾನ್ಯಗಳ ಆಹಾರ ಕಿಟ್ ಗಳನ್ನು ತಯಾರಿಸಿ ನೀಡಲು ಸರ್ಕಾರ ಸೂಚಿಸಿದೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ಬ್ರಾಹ್ಮಣ ಅರ್ಚಕರು ಕಷ್ಟದಲ್ಲಿದ್ದಾರೆ ಎಂಬ ವಿಚಾರವಾಗಿ ಕಂದಾಯ ಸಚಿವ ಹಾಗೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸಚಿವರು ಚರ್ಚಿಸಿ ಕಿಟ್ ನೀಡುವಂತೆ ನಿರ್ದೇಶನ ನೀಡಿದ್ದಾರೆ.

ಇತ್ತೀಚಿನ ಸುದ್ದಿ