ಕೇವಲ 13 ಗಂಟೆಗಳಲ್ಲಿ ಇಡೀ ಕುಟುಂಬ ಕೊರೊನಾಕ್ಕೆ ಬಲಿ! - Mahanayaka
5:01 AM Wednesday 11 - December 2024

ಕೇವಲ 13 ಗಂಟೆಗಳಲ್ಲಿ ಇಡೀ ಕುಟುಂಬ ಕೊರೊನಾಕ್ಕೆ ಬಲಿ!

covid
21/05/2021

ಸಾಂಗ್ಲಿ: ಕೇವಲ 13 ಗಂಟೆಗಳೊಳಗೆ ಇಡೀ ಕುಟುಂಬವೊಂದು ಕೊರೊನಾಕ್ಕೆ ಬಲಿಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ತಂದೆ, ತಾಯಿ ಹಾಗೂ ಮಗ ಕೊರೊನಾಕ್ಕೆ ಬಲಿಯಾಗಿದ್ದಾರೆ.

75 ವರ್ಷ ವಯಸ್ಸಿನ ಮಹಾದೇವ್ ಜಿಮೂರ್ ಹಾಗೂ ಅವರ ಪತ್ನಿ  66 ವರ್ಷ ವಯಸ್ಸಿನ ಸುಶೀಲ್ ಜಿಮೂರ್ ಮತ್ತು ಇವರ ಪುತ್ರ 30 ವರ್ಷ ವಯಸ್ಸಿನ ಸಚಿನ್ ಜಿಮೂರ್ ಕೊರೊನಾಕ್ಕೆ ಬಲಿಯಾದವರಾಗಿದ್ದಾರೆ.

ಮೊದಲು ತಾಯಿ ಸುಶೀಲ್ ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆ ಬಳಿಕ ತಂದೆ ಮಹಾದೇವ್ ಅವರಿಗೂ ಪಾಸಿಟಿವ್ ಬಂದಿತ್ತು. ಮಹಾದೇವ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಅವರಿಗೆ  ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಬುಧವಾರ ಬೆಳಗ್ಗೆ 5 ಗಂಟೆಗೆ ಅವರು ಮೃತಪಟ್ಟಿದ್ದರು. ಮಹಾದೇವ್ ಅವರ ಅಂತ್ಯಕ್ರಿಯೆ ಮುಗಿಯುವುದರೊಳಗೆ ಪತ್ನಿ ಸುಶೀಲ್ ಕೂಡ ಮೃತಪಟ್ಟಿದ್ದಾರೆ. ಸುಶೀಲ್ ಅವರು ಮೃತಪಟ್ಟ ಸುದ್ದಿ ಕುಟುಂಬಸ್ಥರಿಗೆ ದೊರಕುವ ಮೊದಲೇ ಪುತ್ರ ಸಚಿನ್ ಕೂಡ ಕೊರೊನಾಕ್ಕೆ ಬಲಿಯಾಗಿದ್ದಾರೆ.

ಇತ್ತೀಚಿನ ಸುದ್ದಿ