ಗಂಗಾ ನದಿ ದಂಡೆಯಲ್ಲಿ ದಫನ ಮಾಡಿದ ಸ್ಥಿತಿಯಲ್ಲಿ 150ಕ್ಕೂ ಅಧಿಕ ಮೃತದೇಗಳು ಪತ್ತೆ - Mahanayaka
10:04 PM Wednesday 12 - March 2025

ಗಂಗಾ ನದಿ ದಂಡೆಯಲ್ಲಿ ದಫನ ಮಾಡಿದ ಸ್ಥಿತಿಯಲ್ಲಿ 150ಕ್ಕೂ ಅಧಿಕ ಮೃತದೇಗಳು ಪತ್ತೆ

khanpur
21/05/2021

ಕಾನ್ಪುರ: ಗಂಗಾ ನದಿಯ ದಂಡೆಯಲ್ಲಿ ಸುಮಾರು 150ಕ್ಕೂ ಅಧಿಕ ಮೃತದೇಹಗಳನ್ನು ದಫನ ಮಾಡಲಾಗಿದ್ದು, ಈ ಪ್ರದೇಶಕ್ಕೆ ವಾಹನಗಳು ಬರಲು ರಸ್ತೆಗಳಿಲ್ಲ. ಆದರೂ ಹೇಗೆ ಇಲ್ಲಿ ಗೆ ತರಲಾಗಿದೆ ಎನ್ನುವ ಅನುಮಾನಗಳು ಮೂಡಿವೆ.

ಕಾನ್ಪುರದ ಬಳಿಯ ಗಂಗಾ ನದಿಯಲ್ಲಿ ಮರಳುಗಳಲ್ಲಿ ಸಾಲು ಸಾಲು ಮೃತದೇಹಗಳನ್ನು ದಫನ ಮಾಡಿರುವುದು ಕಂಡು ಬಂದಿದೆ. ಮೃತರ ಹೊದಿಕೆಗಳು, ಲೋಟ, ಮದ್ದಿನ ಬಾಟಲಿಗಳನ್ನು ಕೂಡ ಅದೇ ಸ್ಥಳಗಳಲ್ಲಿ ಎಸೆಯಲಾಗಿರುವುದು ಕಂಡು ಬಂದಿದೆ.

ನದಿಯ ಬಳಿಯಲ್ಲಿ ಉದ್ದವಾದ ಸೇತುವೆ ಇದೆ. ಆದರೆ ನದಿಗೆ ಇಳಿಯಲು ಯಾವುದೇ ರಸ್ತೆಗಳು ಕೂಡ ಅಲ್ಲಿ ಇಲ್ಲ. ಮೃತದೇಹವನ್ನು ಮೇಲಿನಿಂದ ಎತ್ತಿ ಕೆಳಗಡೆ ಎಸೆದು ಬಳಿಕ ಹೂತಿಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


Provided by

ಘಟನಾ ಸ್ಥಳಕ್ಕೆ ಪತ್ರಕರ್ತರ ತಂಡವೊಂದು ಭೇಟಿ ನೀಡಿದ್ದರಿಂದಾಗಿ ಈ ಘಟನೆ ಬೆಳಕಿಗೆ ಬಂದಿದೆ. ಮರಳಿನಲ್ಲಿ ನೂರಾರು ಮೃತದೇಹಗಳನ್ನು ಹುದುಗಿಸಿಡಲಾಗಿದೆ.  ಮಳೆಯಿಂದ ನದಿ ತುಂಬಿದರೆ, ಈ ಮೃತದೇಹಗಳೆಲ್ಲವೂ ಗಂಗಾ ನದಿಗೆ ಮತ್ತೆ ಸೇರಲಿದೆ.

ಮೋದಿ ಸರ್ಕಾರ ಒಂದೆಡೆ ಗಂಗಾ ನದಿ ಶುದ್ಧೀಕರಣ ಯೋಜನೆಯ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ವಿನಿಯೋಗಿಸುತ್ತಿದೆ. ಆದರೆ ಇದರ ನಡುವೆಯೇ ಕೊವಿಡ್ ಅಥವಾ ಬೇರಾವುದೋ, ಕಾರಣಗಳಿಂದ ಮೃತಪಟ್ಟ ಮೃತದೇಹಗಳನ್ನು ಇದೇ ಪ್ರದೇಶದಲ್ಲಿ ಹೂತು ಹಾಕಲಾಗಿದೆ.

ಇತ್ತೀಚಿನ ಸುದ್ದಿ