ಮೇಕೆ ಮರಿಯನ್ನು ಹೊತ್ತುಕೊಂಡು 3 ಕಿ.ಮೀ. ದೂರ ನಡೆದ ಅಜ್ಜಿ | ಕಾರಣ ಏನು ಗೊತ್ತಾ?
ಧಾರವಾಡ: ರಾಜ್ಯಾದ್ಯಂತ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಈ ನಡುವೆ ವೃದ್ಧೆಯೊಬ್ಬರು ತಮ್ಮ ಪ್ರೀತಿಯ ಮೇಕೆಯನ್ನು ಹೊತ್ತುಕೊಂಡು ಮೂರು ಕಿ.ಮೀ, ದೂರದಲ್ಲಿರುವ ಪಶು ಆಸ್ಪತ್ರೆಗೆ ಆಗಮಿಸಿದ್ದಾರೆ.
ಧಾರವಾಡದ ಹೊರವಲಯದ ಹೆಬ್ಬಳ್ಳಿ ಅಗಸಿಯ ನಿವಾಸಿ ಶಂಕ್ರವ್ವ ಎಂಬವ ವೃದ್ಧೆ, ಗಾಯಗೊಂಡಿದ್ದ ತಮ್ಮ ಮೇಕೆಯ ಮರಿಯನ್ನು ಹೊತ್ತುಕೊಂಡು ಮೂರು ಕಿ.ಮೀ. ನಡೆದಿದ್ದಾರೆ. ತಮಗೆ ನಡೆಯಲು ಕಷ್ಟವಾಗುತ್ತಿದ್ದರೂ ಕೂಡ ಮೇಕೆ ಮರಿಯ ಪ್ರಾಣ ಉಳಿಸಬೇಕು ಎಂದು ಅವರು ಮೇಕೆಯನ್ನು ಹೊತ್ತು ನಡೆದುಕೊಂಡು ಹೋಗಿದ್ದಾರೆ.
ದಾರಿ ಮಧ್ಯೆ ಸುಸ್ತಾದಾಗ ಕುಳಿತು ವಿಶ್ರಮಿಸಿ, ಮೇಕೆಗೆ ತಿನ್ನಲು ಸೊಪ್ಪನ್ನು ನೀಡುತ್ತಾ, ಅವರು ಹೇಗೋ ಪಶು ಆಸ್ಪತ್ರೆಗೆ ಮೇಕೆಯನ್ನು ಕರೆದೊಯ್ದು ವಾಪಸ್ ತಮ್ಮ ಮನೆಗೆ ತೆರಳಿದ್ದಾರೆ. ತಮ್ಮ ಊರಿನಲ್ಲಿ ರಸ್ತೆಗೆ ಡಾಂಬರ್ ಹಾಕುತ್ತಿದ್ದ ವೇಳೆ ಮೇಕೆ ಮರಿ ಆಕಸ್ಮಿಕವಾಗಿ ಡಾಂಬರ್ ಗೆ ಬಿದ್ದಿದ್ದು, ಇದರಿಂದಾಗಿ ಗಾಯಗೊಂಡಿತ್ತು. ಮೇಕೆಯ ಸ್ಥಿತಿ ನೋಡಲಾಗದೇ ಅಜ್ಜಿಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಈ ಫೋಟೋಗಳು ವೈರಲ್ ಆಗಿದೆ.