ಎಸ್ಸಿ-ಎಸ್ಟಿ ಯುವಕರಿಗೆ ಮೊಬೈಲ್ ದುರಸ್ತಿ ಸೇರಿದಂತೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ | ಶೀಘ್ರವೇ ಅರ್ಜಿ ಸಲ್ಲಿಸಿ
ಧಾರವಾಡ: ಕೌಶಲ್ಯಾಭಿವೃದ್ದಿ ಉದ್ದಿಮೆಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಂಸ್ಥೆಯಾದ, ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್) ಧಾರವಾಡ ಇವರ ಸಹಯೋಗದಲ್ಲಿ ಆಸಕ್ತಿ ಇರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಅಕ್ಟೋಬರ್, ನವೆಂಬರ ತಿಂಗಳಲ್ಲಿ ನಡೆಯುವ 30 ದಿನಗಳ ಉಚಿತ “ಮೊಬೈಲ್ ದುರಸ್ತಿ ಹಾಗೂ ಸೇವೆ” ಹಾಗೂ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.
ತರಬೇತಿಯು ಕಮಲಾಪೂರ ಧವಾಖಾನೆ ಹತ್ತಿರದ ಭವಾನಿ ಡ್ಯಾನ್ಸ್ ಅಕಾಡೆಮಿ ಲಿಂಗರಾಜ ಪ್ರೆಸ್ ಹತ್ತಿರ, ಸ್ಟೇಷನ್ ರೋಡ್, ಮಾಳಮಡ್ಡಿಯಲ್ಲಿ ನಡೆಯುವುದು. 18 ರಿಂದ 45 ವರ್ಷದೊಳಗಿನ 10ನೇ ತರಗತಿ, ಪಿಯುಸಿ, ಡಿಪ್ಲೋಮಾ, ಪದವಿ ಪಾಸಾದ ಸ್ವಂತ ಉದ್ಯಮ ಆರಂಭ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು 3 ಪಾಸ್‍ಪೋರ್ಟ್ ಅಳತೆಯ ಬಾವಚಿತ್ರ, ಆಧಾರ ಕಾರ್ಡ್ ಝರಾಕ್ಸ್ ಪ್ರತಿ, ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರದೊಂದಿಗೆ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಅಕ್ಟೋಬರ್ 31 ರಂದು ಬೆಳಗ್ಗೆ 10 ಗಂಟೆಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 7795798350/ 8792343840 / 9740933663 ಸಂಪರ್ಕಿಸಬಹುದಾಗಿದೆ ಎಂದು ಸಿಡಾಕ್ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿ.ಸೂ: ಈ ತರಬೇತಿಯು ಇತರ ಜಿಲ್ಲೆಗಳಿಯೂ ಇದೆಯೇ ಎಂಬ ಬಗ್ಗೆ ಜಮ್ಮ ಸಮೀಪದ ಸಿಡಾಕ್ ಜಂಟಿನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.