ಅಪಘಾತ ನಡೆದು ಒಂದು ಗಂಟೆ ಕಳೆದರೂ ವಿಡಿಯೋ ಮಾಡುತ್ತಿದ್ದ ಸಾರ್ವಜನಿಕರು | ಗಾಯಾಳು ಸಾವು - Mahanayaka
4:23 PM Wednesday 11 - December 2024

ಅಪಘಾತ ನಡೆದು ಒಂದು ಗಂಟೆ ಕಳೆದರೂ ವಿಡಿಯೋ ಮಾಡುತ್ತಿದ್ದ ಸಾರ್ವಜನಿಕರು | ಗಾಯಾಳು ಸಾವು

manvi byagavat
24/05/2021

ರಾಯಚೂರು: ಅಪಘಾತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ಯುವಕನೋರ್ವ  ರಸ್ತೆಯಲ್ಲಿ ನರಳಾಡುತ್ತಿದ್ದರೆ, ಜನರು ವಿಡಿಯೋ ಮಾಡುತ್ತಾ, ಆತ ಯಾವಾಗ ಸಾಯುತ್ತಾನೆ ಎಂದು ನೋಡುತ್ತಾ ನಿಂತಿರುವ ಅಮಾನವೀಯ ಘಟನೆ  ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ನಡೆದಿದೆ.

ಅಪಘಾತ ನಡೆದು ಒಂದು ಗಂಟೆಗಳ ವರೆಗೆ ಗಾಯಾಳು ರಸ್ತೆಯಲ್ಲಿ ಬಿದ್ದು ನರಳಾಡಿದ್ದಾನೆ. ಸಕಾಲಕ್ಕೆ ಆಸ್ಪತ್ರೆಯಕ್ಕೆ ಕರೆದೊಯ್ಯುತ್ತಿದ್ದರೆ ಆತ ಬದುಕುತ್ತಿದ್ದ. ಆದರೆ, ರಸ್ತೆಯ ಬಳಿ ಇದ್ದವರು ಯಾರು ಕೂಡ ಯುವಕನನ್ನು ಉಪಚರಿಸಲು ಮುಂದಾಗಿಲ್ಲ. ಆಸ್ಪತ್ರೆಗೂ ಕರೆದುಕೊಂಡು ಹೋಗಲು ಮುಂದಾಗದೇ ಅಮಾನವೀಯತೆ ತೋರಿದ್ದಾರೆ.

ಮೃತ ಯುವಕ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ಸಿದ್ಧಾರ್ಥ್ ಆಗಿದ್ದು, ಅಪಘಾತ ಸಂಭವಿಸಿದ ಬಳಿಕ ಸಾರ್ವಜನಿಕರು ಘಟನೆಯನ್ನು ವಿಡಿಯೋ ಮಾಡುತ್ತಾ ಕಾಲ ಕಳೆದಿದ್ದಾರೆ. ಸುಮಾರು 1 ತಾಸುಗಳ ಬಳಿಕ ಸಿದ್ಧಾರ್ಥನ ಕುಟುಂಬಕ್ಕೆ ಮಾಹಿತಿ ಲಭಿಸಿದೆ. ಅವರು ಸ್ಥಳಕ್ಕೆ ಬಂದಾಗಲೂ ಸಿದ್ಧಾರ್ಥ್ ಉಸಿರಾಡುತ್ತಿದ್ದ. ಅವರು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ, ಈ ದುಷ್ಟ ಜನರ ನಡುವೆ ತಾನು ಬದುಕಲಾರೆ ಎಂದೋ ಏನೋ… ಸಿದ್ಧಾರ್ಥ್ ಕೊನೆಯುಸಿರೆಳೆದಿದ್ದಾರೆ.

ಇತ್ತೀಚಿನ ಸುದ್ದಿ