ದೇಶಕ್ಕಾಗಿ ಏನಾದರೂ ಮಾಡಿ ಇಲ್ಲವೇ ರಾಜೀನಾಮೆ ನೀಡಿ | ಮೊದಲ ಬಾರಿ ಪ್ರಧಾನಿ ವಿರುದ್ಧ ಮನಮೋಹನ್ ಸಿಂಗ್ ಖಾರ ಪ್ರತಿಕ್ರಿಯೆ
ನವದೆಹಲಿ: ದೇಶದ ಸ್ಥಿತಿ ನೋಡಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಈವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ಸೌಮ್ಯವಾಗಿ ಟೀಕಿಸುತ್ತಿದ್ದ ಮನಮೋಹನ್ ಸಿಂಗ್ ಈ ಬಾರಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣೀರಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮನಮೋಹನ್ ಸಿಂಗ್ , ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಯನ್ನು ಕೇಳಿದ್ದಾರೆ.
“ಸಾಂಕ್ರಾಮಿಕ ರೋಗ ಎಲ್ಲ ದೇಶಗಳಿಗೂ ಹಾನಿ ಮಾಡಿದೆ. ಆದರೆ, ಕೆನಡ ಪ್ರಧಾನಿ ಆಳಲಿಲ್ಲ, ಯುಎಸ್ ಅಧ್ಯಕ್ಷ ಅಳಲಿಲ್ಲ, ಇಟೆಲಿ ಪ್ರಧಾನಿ ಅಳಲಿಲ್ಲ, ಯುಕೆ ಪ್ರಧಾನಿ ಅಳಲಿಲ್ಲ, ನೀವ್ಯಾಕೆ ಅಳುತ್ತಿದ್ದೀರಿ ಮೋದಿ? ಎಂದು ಪ್ರಶ್ನಿಸಿರುವ ಅವರು, ಭಾರತಕ್ಕೆ ಬೇಕಿರುವುದು ವ್ಯಾಕ್ಸಿನ್(ಕೊರೊನಾ ಲಸಿಕೆ) ಹೊರತು ನಿಮ್ಮ ಕಣ್ಣೀರಲ್ಲ, ದಯವಿಟ್ಟು ದೇಶಕ್ಕಾಗಿ ಏನಾದರೂ ಮಾಡಿ, ಇಲ್ಲವೇ ರಾಜೀನಾಮೆ ನೀಡಿ” ಎಂದು ಮನಮೋಹನ್ ಸಿಂಗ್ ಪ್ರತಿಕ್ರಿಯಿಸಿದ್ದು, ಮೊಸಳೆ ಕಣ್ಣೀರು ಎನ್ನುವ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.
https://twitter.com/PManmohansingh/status/1395830770279792645?s=20