ನಾಳೆಯಿಂದ ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ನಿಷೇಧ? - Mahanayaka
11:14 PM Wednesday 11 - December 2024

ನಾಳೆಯಿಂದ ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ನಿಷೇಧ?

social media
25/05/2021

ನವದೆಹಲಿ: ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ನಾಳೆಯಿಂದ  ಭಾರತದಲ್ಲಿ ಇರಲಿದೆಯೇ ಎಂಬ ಅನುಮಾನಗಳು ಇದೀಗ ಮೂಡಿದ್ದು, ಹೊಸ ಐಟಿ ನಿಯಮಗಳನ್ನು ಈ ಆಪ್ ಗಳು ಪಾಲಿಸದ ಹಿನ್ನೆಲೆಯಲ್ಲಿ ಈ ಆಪ್ ಗಳ ಕಾರ್ಯನಿರ್ವಹಣೆ ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಬಹುತೇಕರು ಬಳಸುವ ಮುಖ್ಯ ಸಾಮಾಜಿಕ ಜಾಲತಾಣಗಳ ಕಾರ್ಯನಿರ್ವಹಣೆ ಸ್ಥಗಿತಗೊಳ್ಳುತ್ತದೆಯೇ ಎನ್ನುವ ಅನುಮಾನಗಳು ಇದೀಗ ಜನರನ್ನು ಕಾಡುತ್ತಿದ್ದು, ನಾಳೆಯಿಂದ ಈ ಆಪ್ ಗಳ ಕಾರ್ಯನಿರ್ವಹಣೆ ಸಾಧ್ಯವೇ ಗೊಂದಲ ಸೃಷ್ಟಿಯಾಗಿವೆ.

ಭಾರತದಲ್ಲಿ ಕಾರ್ಯನಿರ್ವಹಿಸಲು ಇರುವ ಹೊಸ ಮಧ್ಯಸ್ಥಿಕೆಯ ಮಾರ್ಗಸೂಚಿಗಳನ್ನು ಪಾಲಿಸಲು ಈ ಆಪ್ ಗಳಿಗೆ  ಮೇ 25ರವರೆಗೆ ಗಡುವು ನೀಡಲಾಗಿತ್ತು. ಈ ಗಡುವು ಇಂದಿಗೆ ಮುಕ್ತಾಯವಾಗಿದೆ. ಹೊಸ ನಿಯಮಗಳನ್ನು ಈ ಕಂಪೆನಿಗಳು ಪಾಲಿಸಲಿವೆಯೇ? ಅಥವಾ ಇನ್ನಷ್ಟು ಸಮಯಾವಕಾಶಗಳನ್ನು ಸಾಮಾಜಿಕ ಜಾಲತಾಣ ಕಂಪೆನಿಗಳಿಗೆ ನೀಡಲಾಗುತ್ತಿದೆಯೇ?  ಎನ್ನುವುದು ತಿಳಿದು ಬಂದಿಲ್ಲ. ಆದರೆ, ನಾಳೆಯಿಂದ ಈ ಆಪ್ ಗಳು ಕಾರ್ಯನಿರ್ವಹಿಸಲಿವೆಯೇ ಎನ್ನುವ ಅನುಮಾನಗಳು ಇದೀಗ ಸೃಷ್ಟಿಯಾಗಿವೆ.

ಇತ್ತೀಚಿನ ಸುದ್ದಿ