ಸಂಸದ ಅನಂತ್ ಕುಮಾರ್ ಹೆಗಡೆಯನ್ನು ಹುಡುಕಿ ಕೊಡಲು ತಹಶೀಲ್ದಾರ್ ಗೆ ಮನವಿ
ಬೆಳಗಾವಿ: ಕೆನರಾ ಲೋಕಸಭಾ ಸಂಸದರಾಗಿರುವ ಅನಂತ್ ಕುಮಾರ್ ಹೆಗೆ ಅವರು ಕಿತ್ತೂರು ಕ್ಷೇತ್ರದ ಸಂಸದರೂ ಹೌದು. ಆದರೆ ಕೆಲವು ವರ್ಷಗಳಿಂದ ಕ್ಷೇತ್ರದಲ್ಲಿ ಅವರು ಕಂಡು ಬರುತ್ತಿಲ್ಲ ಅವರನ್ನು ಹುಡುಕಿ ಕೊಡಿ ಎಂದು ತಹಶೀಲ್ದಾರ್ ಅವರಿಗೆ ಕಿತ್ತೂರು ಕ್ಷೇತ್ರ ಜನತೆ ಪತ್ರ ಬರೆದಿದ್ದಾರೆ.
ಕೊರೊನಾ ಮಹಾಮಾರಿ ಪರಿಸ್ಥಿತಿಯಿಂದ ಕಿತ್ತೂರು ಕ್ಷೇತ್ರದ ಜನತೆ ಸಾವು ನೋವುಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ತುರ್ತು ಸಭೆಗಳಿಗೆ ಅವರು ಹಾಜರಾಗುತ್ತಿಲ್ಲ. ಇವೆಲ್ಲ ಗಮನಿಸಿದರೆ ಅವರು ನಾಪತ್ತೆಯಾಗಿದ್ದಾರೆ ಎನ್ನುವುದು ನಮ್ಮ ಅಭಿಪ್ರಾಯವಾಗಿದ್ದು, ಅವರನ್ನ ಕೂಡಲೇ ಹುಡುಕಿ ಕೊಡಿ ಎಂದು ಮನವಿ ಮಾಡಲಾಗಿದೆ.
ಇದರ ಜೊತೆಗೆ ಅನಂತ್ ಕುಮಾರ್ ಹೆಗಡೆಯವರ ಭಿತ್ತಿಪತ್ರವೊಂದು ಕೂಡ ವೈರಲ್ ಆಗುತ್ತಿದೆ. ಈ ಭಿತ್ತಿ ಪತ್ರದಲ್ಲಿ ಅನಂತ್ ಕುಮಾರ್ ಅವರ ವಯಸ್ಸು, ಧರ್ಮ, ಜಾತಿ, ದೈಹಿಕ ಗುರುತು ಮುಖ ಚೆಹರೆ, ಭಾಷೆ, ದೇಶದ್ರೋಹಿ ನಾಥೂರಾಮ್ ಗೋಡ್ಸೆ ಇವರ ಆರಾಧ್ಯ ದೈವ ಎಂದೂ ಬರೆಯಲಾಗಿದೆ. ಇವರನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿಯೂ ಬರೆಯಲಾಗಿದೆ.