"ತೇಜಸ್ವಿ ಸೂರ್ಯನೂ ಬೆಡ್ ಬ್ಲಾಕಿಂಗ್ ದಂಧೆಯ ಪ್ರಮುಖ ಆರೋಪಿ" - Mahanayaka
7:47 PM Thursday 26 - December 2024

“ತೇಜಸ್ವಿ ಸೂರ್ಯನೂ ಬೆಡ್ ಬ್ಲಾಕಿಂಗ್ ದಂಧೆಯ ಪ್ರಮುಖ ಆರೋಪಿ”

bjp bed scam
26/05/2021

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸತೀಶ್ ರೆಡ್ಡಿಯ ಆಪ್ತನ ಬಂಧನ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಖಾರವಾಗಿ ಪ್ರತಿಕ್ರಿಯಿಸಿದೆ.

ತಮ್ಮ ಹಗರಣ ಮುಚ್ಚಿಕೊಳ್ಳಲು ಅಮಾಯಕ ವಾರ್ ರೂಮ್ ಸಿಬ್ಬಂದಿಗಳ ಹೆಸರನ್ನು ಬಳಸಿ ಕೋಮು ಬಣ್ಣ ನೀಡಲು ಮುಂದಾಗಿದ್ದ ತೇಜಸ್ವಿ ಸೂರ್ಯ ಈಗ ಎಲ್ಲಿ ಅಡಗಿದ್ದಾರೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

17 ಸಿಬ್ಬಂದಿಗಳ ಉದ್ಯೋಗ, ಆತ್ಮಗೌರವ, ಮರ್ಯಾದೆಯನ್ನು ಕಿತ್ತುಕೊಂಡ ಎಳೆ ಸಂಸದನಿಗೆ ಪಶ್ಚಾತಾಪ ಇಲ್ಲವೇ? ಅವರಿಗಾದ ನಷ್ಟಕ್ಕೆ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುವರಾ ಈಗ? ಎಂದು ಸಂಸದ ತೇಜಸ್ವಿ ಸೂರ್ಯಗೆ ಕಾಂಗ್ರೆಸ್ ಖಡಕ್ ಪ್ರಶ್ನೆಗಳನ್ನು ಕೇಳಿದೆ.

ಬಿಜೆಪಿ ಕಾರ್ಯಕರ್ತ, ಶಾಸಕ ಸತೀಶ್ ರೆಡ್ಡಿ ಆಪ್ತನ ಬಂಧನವಾಗಿದೆ, ಸಣ್ಣ ಮಿಕಗಳನ್ನು ಹಿಡಿದು ದೊಡ್ಡ ಮಿಕಗಳನ್ನು ಬಚಾವ್ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಜೀವ ವಿರೋಧಿ ದಂಧೆಯಲ್ಲಿ ಸತೀಶ್ ರೆಡ್ಡಿಯೇ ಕಿಂಗ್ ಪಿನ್, ಸಂಸದ ತೇಜಸ್ವಿ ಸೂರ್ಯನೂ ಇದರಲ್ಲಿ ಪ್ರಮುಖ ಪಾತ್ರಧಾರಿ. ಇವರೆಲ್ಲರ ಬಂಧನವಾಗಿ, ಸಮಗ್ರ ತನಿಖೆಯಾಗಬೇಕು.

ಇತ್ತೀಚಿನ ಸುದ್ದಿ