ನನ್ನನ್ನು ಬಂಧಿಸುವ ಯಾವುದೇ ವ್ಯಕ್ತಿ ಅಧಿಕಾರದಲ್ಲಿಲ್ಲ | ಬಾಬಾ ರಾಮ್ ದೇವ್
26/05/2021
ಡೆಹ್ರಾಡೂನ್: ಅಲೋಪತಿಗಳು ಮತ್ತು ವೈದ್ಯರ ಬಗ್ಗೆ ನಾಲಿಗೆ ಹರಿಯಬಿಟ್ಟಿದ್ದ ಯೋಗಗುರು ಬಾಬಾ ರಾಮ್ ದೇವ್ ಇದೀಗ ಮತ್ತೊಂದು ದುರಾಂಹಕಾರದ ಮಾತುಗಳನ್ನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ದೇಶದ ಎಲ್ಲ ವೈದ್ಯರು ಬಾಬಾ ರಾಮ್ ದೇವ್ ವಿರುದ್ಧ ಕ್ಯಾಂಪೇನ್ ನಡೆಸುವ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ್ದು, 1 ಸಾವಿರ ಕೋಟಿ ರೂಪಾಯಿಗಳ ,ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಕುರಿತ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಕೇಂದ್ರ ಆರೋಗ್ಯ ಸಚಿವರು ಬಾಬಾ ರಾಮ್ ದೇವ್ ಗೆ ಕೋರಿದ್ದರು. ಇದರ ಬೆನ್ನಲ್ಲೇ ಬಾಬಾ ರಾಮ್ ದೇವ್ ಕ್ಷಮೆ ಕೋರಿದ್ದಾರೆ. ಆದರೆ ಈ ನಡುವೆ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಆಕ್ಷೇಪಕಾರಿ ಹೇಳಿಕೆಯನ್ನು ರಾಮ್ ದೇವ್ ಹೇಳಿದ್ದಾರೆ.
ವಿಡಿಯೋದಲ್ಲಿ ದೇಶದ ಕೆಲವು ಉದ್ಯಮಿಗಳ ಜೊತೆಗೆ ಮಾತನಾಡುತ್ತಿರುವ ಬಾಬಾ ರಾಮ್ ದೇವ್, “ನನ್ನನ್ನು ಬಂಧಿಸುವ ಯಾವುದೇ ವ್ಯಕ್ತಿ ಅಧಿಕಾರದಲ್ಲಿಲ್ಲ” ಎಂದು ಹೇಳಿಕೆ ನೀಡಿದ್ದು, ಟ್ರೆಂಡಿಂಗ್ ಪಡೆಯುವುದಷ್ಟೇ ಜನರ ಉದ್ದೇಶ ಎಂದು ಹೇಳಿದ್ದಾರೆ.