ಬೆಡ್ ಬ್ಲಾಕಿಂಗ್ ದಂಧೆ | ವಾರ್ ರೂಮ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಕೊರೊನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆ ಬ್ಲಾಕ್ ಮಾಡಿಸಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್ ರೆಡ್ಡಿಯ ಅನುಚರ ಬಾಬುನನ್ನು ಬಂಧಿಸಿದ ಬಳಿಕ ಇದೀಗ ವಾರ್ ರೂಮ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ವಾರ್ ರೂಮ್ ನಲ್ಲಿ ಬೆಡ್ ಬ್ಲಾಕಿಂಗ್ ನಲ್ಲಿ ನಿರತರಾಗಿದ್ದರು ಎನ್ನುವ ಆರೋಪದಲ್ಲಿ ವರುಣ್ ಹಾಗೂ ಆತನ ಸ್ನೇಹಿತ ಯಶವಂತ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಗುಣಮುಖವಾಗುತ್ತಿದ್ದ ಹಾಗೂ ಮೃತರಾಗುತ್ತಿದ್ದ ಕೊರೊನಾ ಸೋಂಕಿತರ ಹಾಸಿಗೆಗಳ ಬಗ್ಗೆ ವರುಣ್ ಮಾಹಿತಿ ಪಡೆಯುತ್ತಿದ್ದ. ಜೊತೆಗೆ, ಹಾಸಿಗೆ ಬೇಕೆಂದು ಹೇಳಿ ವಾರ್ ರೂಮ್ಗೆ ಕರೆ ಮಾಡುತ್ತಿದ್ದ ಸೋಂಕಿತರ ಮಾಹಿತಿಯನ್ನೂ ದಾಖಲಿಸಿಕೊಳ್ಳುತ್ತಿದ್ದ’ ‘ಅದೇ ಮಾಹಿತಿಯನ್ನು ವರುಣ್, ಯಶವಂತ್ಗೆ ನೀಡುತ್ತಿದ್ದ. ಬಳಿಕ, ರೋಗಿಗಳನ್ನು ಸಂಪರ್ಕಿಸುತ್ತಿದ್ದ ಯಶವಂತ, ‘ವಾರ್ ರೂಮ್ನಿಂದ ನಿಮಗೆ ಹಾಸಿಗೆ ಸಿಗಲು ಹೆಚ್ಚಿನ ಸಮಯವಾಗುತ್ತದೆ. ಹಣ ಕೊಟ್ಟರೆ ಬೇಗನೆ ಹಾಸಿಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳುತ್ತಿದ್ದ. ಎಂದು ಹೇಳಲಾಗಿದೆ.
ಕೊರೊನಾದ ಭೀತಿಯಿಂದ ಬರುತ್ತಿದ್ದ ಜನರು, ತಮ್ಮವರ ಜೀವ ಉಳಿದರೆ ಸಾಕು ಎಂದು ಆರೋಪಿಗಳ ಖಾತೆಗಳಿಗೆ ನೇರವಾಗಿ ಕೇಳಿದಷ್ಟು ಹಣವನ್ನು ವರ್ಗಾಯಿಸುತ್ತಿದ್ದರು ಎಂದು ವರದಿಯಾಗಿದೆ.