ಮದುವೆಯಾಗಿ ನಾಲ್ಕೇ ದಿನದಲ್ಲಿ ವಧು ಕೊರೊನಾಕ್ಕೆ ಬಲಿ
29/05/2021
ಶಿವಮೊಗ್ಗ: ಮದುವೆಯಾದ ನಾಲ್ಕು ದಿನಗಳಲ್ಲಿಯೇ ನವವಧು ಕೊರೊನಾಕ್ಕೆ ಬಲಿಯಾದ ದಾರುಣ ಘಟನೆಯೊಂದು ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದಿದ್ದು, ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದೆ.
ಮೇ 24ರಂದು ಮಲವಗೊಪ್ಪದ ಪೂಜಾ ಎಂಬ ವಧು ಹರಿಗೆಯ ಮಹೇಶ್ ಎಂಬವರ ಜೊತೆಗೆ ವಿವಾಹವಾಗಿದ್ದರು. ವಿವಾಹದ ಮರುದಿನವೇ ಪೂಜಾಗೆ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಚಿಕಿತ್ಸೆ ಪಡೆದುಕೊಂಡ ಬಳಿಕವೂ ಜ್ವರ ತೀವ್ರವಾಗಿದ್ದು, ಹೀಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಕೊವಿಡ್ ಟೆಸ್ಟ್ ವೇಳೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ವರದಿಯಾಗಿದೆ.