ಮುದ್ದೇಬಿಹಾಳ:  ವಿಕಲಚೇತನರಿಗೆ ಮತ್ತು ಅವರ ಆರೈಕೆದಾರರಿಗೆ  ಕೊವಿಡ್ ಲಸಿಕೆ; ಇಲ್ಲಿದೆ ಮಾಹಿತಿ - Mahanayaka
12:37 AM Friday 13 - December 2024

ಮುದ್ದೇಬಿಹಾಳ:  ವಿಕಲಚೇತನರಿಗೆ ಮತ್ತು ಅವರ ಆರೈಕೆದಾರರಿಗೆ  ಕೊವಿಡ್ ಲಸಿಕೆ; ಇಲ್ಲಿದೆ ಮಾಹಿತಿ

covid lasike
29/05/2021

ಮುದ್ದೇಬಿಹಾಳ:  ತಾಲ್ಲೂಕಿನ ಪುರಸಭೆ ವ್ಯಾಪ್ತಿಯಲ್ಲಿ  ಬರುವ೦ತಹ 18ವರ್ಷ ಮೇಲ್ಪಟ್ಟ ಎಲ್ಲಾ ವಿಕಲಚೇತನರಿಗೆ ಮತ್ತು ಅವರ ಆರೈಕೆದಾರರು (ಪೋಷಕರಿಗೆ )ಕೋವಿಡ 19 ಲಸಿಕೆಯನ್ನು ಜಿಲ್ಲಾಡಳಿತ  ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ  ಹಾಗೂ ನಾಗರಿಕರ ಸಬಲೀಕರಣ ಇಲಾಖೆ ಇವರ ಸಹಯೋಗದಲ್ಲಿ  ದಿನಾಂಕ 31/05/2021 ಸೋಮವಾರ ಸ್ಥಳ ಕೆಬಿಎಂಪಿಎಸ್ ಸ್ಕೂಲ್ ಬಜಾರ್ ರೋಡ್ ಓಸ್ವಾಲ್ ದವಾಖಾನೆ ಎದುರಿಗೆ ಇಲ್ಲಿ ವಿಕಲಚೇತನರಿಗೆ ವ್ಯಾಕ್ಷಿನ್ ಹಾಕಲಾಗುತ್ತದೆ.

ಸದರಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಎಲ್ಲಾ  ವಿಕಲಚೇತನರು ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಾಸಂಸ್ಥೆಗಳ  ಪ್ರತಿನಿಧಿಗಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಕಲಚೇತನರಿಗೆ ವ್ಯಾಕ್ಸಿನ್  ಲಸಿಕೆ ಹಾಕಿಸಿಕೊಳ್ಳಲು ವಿನಂತಿಸಲಾಗಿದೆ ವ್ಯಾಕ್ಸಿನ್ (ಲಸಿಕೆ ) ಹಾಕಿಸಿಕೊಳ್ಳಲು ಬರುವಾಗ ತರಬೇಕಾದ ದಾಖಲಾತಿಗಳು

ಆಧಾರ್ ಕಾರ್ಡ್  ಮತ್ತು ಅಂಗವಿಕಲರ ವೈದ್ಯಕೀಯ ಪ್ರಮಾಣಪತ್ರ (UDID)ತೆಗೆದುಕೊಂಡು ಬರಬೇಕಾಗಿ ವಿನಂತಿ . ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಪರ್ಕ ಸಂಖ್ಯೆಗೆ ಸಂಪರ್ಕಿಸಿ

ಎಸ್. ಕೆ. ಘಾಟಿ. ಎಂಆರ್ ಡಬ್ಲೂ ತಾಲ್ಲೂಕ್ ಪಂಚಾಯತ್ ಮುದ್ದೇಬಿಹಾಳ 9740682979

9880172801

9972213078

9741285553

9845865698

ಇತ್ತೀಚಿನ ಸುದ್ದಿ