ಅತ್ಯಾಚಾರ ಪ್ರಕರಣದಲ್ಲಿ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಅರೆಸ್ಟ್! - Mahanayaka
5:06 PM Thursday 12 - December 2024

ಅತ್ಯಾಚಾರ ಪ್ರಕರಣದಲ್ಲಿ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಅರೆಸ್ಟ್!

kangana ranaut bodyguard
29/05/2021

ಮಂಡ್ಯ:  ಬಾಲಿವುಡ್ ನಟಿ ಕಂಗನಾ ರಣಾವತ್ ಬಾಡಿ ಗಾರ್ಡ್ ಕುಮಾರ ಶೆಟ್ಟಿ ಯಾನೆ ಕುಮಾರ ಹೆಗಡೆ ಎಂಬಾತನನ್ನು ಅತ್ಯಾಚಾರ ಪ್ರಕರಣದಲ್ಲಿ ಮುಂಬೈ ಪೊಲೀಸರು  ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ಬಂಧಿದ್ದಾರೆ.

ಕಳೆದ 8 ವರ್ಷಗಳ ಹಿಂದೆ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡಿದ್ದ ಕುಮಾರ್ ಹೆಗಡೆ,  ಕಳೆದ ವರ್ಷ ಜೂನ್ ನಲ್ಲಿ ಮದುವೆ ಪ್ರಪೋಸ್ ಕೂಡ ಮಾಡಿದ್ದ. ಅದಕ್ಕೆ ಯುವತಿಯೂ ಸಮ್ಮತಿಸಿದ್ದಳು.  ಇದಾದ ಬಳಿಕ ಆತ ಯುವತಿಯ ಜೊತೆಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಆರಂಭಿಸಿದ್ದಾನೆ. ಏಪ್ರಿಲ್ 27ರಂದು , ತನ್ನ ತಾಯಿ ನಿಧನರಾಗಿದ್ದಾರೆ ಎಂದು ಹೇಳಿ ಯುವತಿಯಿಂದ 50 ಸಾವಿರ ರೂಪಾಯಿ ಪಡೆದುಕೊಂಡು  ಅಪಾರ್ಟ್ ಮೆಂಟ್ ನಿಂದ ಹೊರ ಬಂದಿದ್ದ. ಆ ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ದೂರನ್ನು ಆಧರಿಸಿ ಮುಂಬೈ ಪೊಲೀಸರು ಕುಮಾರ್​ ಹೆಗಡೆಗಾಗಿ ಹುಡುಕಾಟ ನಡೆಸಿದ್ದರು. ಈತ ಹೆಗ್ಗಡಹಳ್ಳಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಬಂದು ಬಂಧಿಸಿದ್ದಾರೆ. ಸದ್ಯ, ಕೆಆರ್ ಪೇಟೆಯ ಜೆಎಂಎಫ್​ಸಿ ಕೋರ್ಟ್​​ಗೆ ಹಾಜರುಪಡಿಸಿ ಮುಂಬೈಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ