ಕೆಆರ್ ಎಸ್ ಡ್ಯಾಮ್ ನಲ್ಲಿ ಬಿರುಕು ವಿಚಾರ ಗಂಭೀರವಾಗಿ ಪರಿಗಣಿಸಿ | ಬಿಎಸ್ ಪಿ ಮುಖಂಡ ಗುರುಮೂರ್ತಿ
ಮೈಸೂರು: ಕರ್ನಾಟಕದ ಪ್ರಸಿದ್ಧ ಕೆಆರ್ ಎಸ್ ಡ್ಯಾಮ್ ಬಿರುಕು ಬಿಟ್ಟಿದೆ. ಆದರೆ ಅದನ್ನು ಪರಿಶೀಲಿಸಿ ತನಿಖೆ ನಡೆಸಲು ಸ್ಥಳೀಯ ಆಡಳಿತ ಅವಕಾಶ ನೀಡುತ್ತಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅವರ ಹೇಳಿಕೆ ನೀಡಿದ್ದು, ಇದನ್ನು ಕಡೆಗಣಿಸ ಬಾರದು ಎಂದು ಬಿಎಸ್ ಪಿ ಮುಖಂಡ ಗುರುಮೂರ್ತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುಮಲತಾ ರವರು ಮಾಡಿರುವ ಆರೋಪ ಬಹಳ ಗಂಭೀರವಾದದ್ದು. ಇದನ್ನು ಕಡೆಗಣಿಸದೆ ಕೂಡಲೇ ಕಾರ್ಯಪ್ರವೃತ್ತರಾಗಿ. ಸ್ಥಳೀಯ ರಾಜಕಾರಣಿಗಳು ಎಷ್ಟೇ ಬಲಾಡ್ಯರಾದರೂ ಸಹ ಅವರನ್ನು ಶಿಕ್ಷಿಸಿ, ಕೆ ಆರ್ ಎಸ್ ಅಣೆಕಟ್ಟೆಯನ್ನು ಕೂಡಲೇ ದುರಸ್ತಿಗೊಳಿಸುವ ಕಾರ್ಯಕ್ಕೆ ಕೈ ಹಾಕಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಕ್ಕೆ ನೀವೇ ನೇರ ಹೊಣೆಯಾಗುತ್ತೀರಿ ಎಂದು ಅವರು ಎಚ್ಚರಿಸಿದ್ದಾರೆ.
ಈಗಾಗಲೇ ಕರೋನಾ ವಿಷಯದಲ್ಲಿ ಮುಂಜಾಗ್ರತಾ ಕಾರ್ಯಕ್ರಮಗಳನ್ನು ತೆಗೆದುಕೊಳ್ಳದೆ ರಾಜ್ಯದ ಜನರು ಸಂಕಷ್ಟಕ್ಕೀಡಾಗಿದ್ದು, ಸಾವು ನೋವುಗಳನ್ನು ನೋಡ ಬೇಕಾದಂತಹ ಪರಿಸ್ಥಿತಿ ಬಂದಿದೆ. ಕೆ ಆರ್ ಎಸ್ ಆಣೆಕಟ್ಟು ನಮ್ಮೆಲ್ಲರ ಅಸ್ಮಿತೆ ಆಗಿದೆ. ಬೆಂಗಳೂರಿಗರಾದ ನಮ್ಮನ್ನೆಲ್ಲ ಪೊರೆಯುತ್ತಿರುವ ಜೀವಸೆಲೆಯಾಗಿದೆ.ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ತಮ್ಮ ಫೇಸ್ ಬುಕ್ ಗೋಡೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.