ಕೊರೊನಾ ಸೋಂಕಿತನ ಮೃತದೇಹವನ್ನು ನದಿಗೆಸೆದ ಸಂಬಂಧಿಕರು | ವಿಡಿಯೋ ವೈರಲ್
30/05/2021
ಲಕ್ನೋ: ಗಂಗಾ ನದಿಯ ದಂಡೆಯಲ್ಲಿ ನೂರಾರು ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಿರುವ ವಿಚಾರ ಇನ್ನೂ ಚರ್ಚೆಯಲ್ಲಿರುವಾಗಲೇ, ಮತ್ತೊಂದು ಘಟನೆ ನಡೆದಿದ್ದು, ಕೊರೊನಾ ಸೋಂಕಿತ ವ್ಯಕ್ತಿಯ ಮೃತದೇಹವನ್ನು ಸೇತುವೆಯ ಮೇಲಿನಿಂದ ನದಿಗೆ ಎಸೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವ್ಯಕ್ತಿಯೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಸೇತುವೆಯ ಮೇಲಿನಿಂದ ಮೃತದೇಹವನ್ನು ನದಿಗೆ ಎಸೆಯುತ್ತಿರುವ ದೃಶ್ಯ ಕಂಡು ಬಂದಿದ್ದು, ತಕ್ಷಣವೇ ಅವರು, ವಿಡಿಯೋ ಸೆರೆ ಹಿಡಿದಿದ್ದಾರೆ.
ಇನ್ನೂ ಈ ವಿಡಿಯೋ ಕೊರೊನಾ ಸೋಂಕಿತನದ್ದೇ ಂದು ಬಲ್ರಾಮ್ ಪುರ ಚೀಫ್ ಮೆಡಿಕಲ್ ಆಫಿಸರ್ ದೃಢಪಡಿಸಿದ್ದು, ಕುಟುಂಬಸ್ಥರೇ ಮೃತದೇಹವನ್ನು ನದಿಗೆ ಎಸೆದಿದ್ದಾರೆ ಎಂದು ಹೇಳಿದ್ದಾರೆ. ಘಟನೆ ಸಂಬಂಧ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಪತ್ತೆ ಹಚ್ಚಿ ಕುಟುಂಬಸ್ಥರಿಗೇ ಹಸ್ತಾಂತರಿಸಲಾಗಿದೆ.