ಲಕ್ಷದ್ವೀಪದ ಜನರ ಮೇಲೆ ಕೇಂದ್ರದ ದಬ್ಬಾಳಿಕೆಯ ವಿರುದ್ಧ ಕೇರಳ ಸಿಎಂ ನಿರ್ಣಯ ಮಂಡನೆ
31/05/2021
ತಿರುವನಂತಪುರ: ಲಕ್ಷದ್ವೀಪದ ಆಡಳಿತಾಧಿಕಾರಿ ಕೈಗೊಂಡಿರುವ ಕ್ರಮಗಳ ವಿರುದ್ಧ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು, ಆ ನಿವಾಸಿಗಳಿಗೆ ಬೆಂಬಲ ನೀಡುವ ಸಂಬಂಧ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೋಮವಾರ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿದರು.
ದ್ವೀಪಸಮೂಹದ ಸ್ಥಳೀಯ ನಿವಾಸಿಗಳ ಜೀವನಶೈಲಿ ಮತ್ತು ಪರಿಸರ ವ್ಯವಸ್ಥೆಯನ್ನು ನಾಶಮಾಡುವ ಮತ್ತು ಹಿಂಬಾಗಿಲಿನ ಮೂಲಕ ‘ಕೇಸರಿ ಪಡೆಯ ಕಾರ್ಯಸೂಚಿಯನ್ನು’ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಣಯ ಮಂಡಿಸುವ ಸಂದರ್ಭದಲ್ಲಿ ಅವರು ಹೇಳಿದರು.
‘ತಮ್ಮ ಅಜೆಂಡಾದ ಭಾಗವಾಗಿ ತೆಂಗಿನ ಮರಗಳನ್ನು ಕೇಸರಿ ಬಣ್ಣದಿಂದ ಚಿತ್ರಿಸಲಾಗಿದೆ. ಈ ಪ್ರಯತ್ನಗಳು ಲಕ್ಷದ್ವೀಪದಲ್ಲಿ ತಮ್ಮ ಕೇಸರಿ ಅಜೆಂಡ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳನ್ನು ಒತ್ತಾಯಪೂರ್ವಕವಾಗಿ ಹೇರುವುದಾಗಿದೆ’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.