ತಂದೆ ಕೂರಿಸಿಕೊಂಡು  1200 ಕಿ.ಮೀ. ವರೆಗೆ ಸೈಕಲ್ ನಲ್ಲಿ ತೆರಳಿ ಸುದ್ದಿಯಾಗಿದ್ದ ಬಾಲಕಿಯ ತಂದೆ ಇನ್ನಿಲ್ಲ - Mahanayaka
8:26 AM Thursday 12 - December 2024

ತಂದೆ ಕೂರಿಸಿಕೊಂಡು  1200 ಕಿ.ಮೀ. ವರೆಗೆ ಸೈಕಲ್ ನಲ್ಲಿ ತೆರಳಿ ಸುದ್ದಿಯಾಗಿದ್ದ ಬಾಲಕಿಯ ತಂದೆ ಇನ್ನಿಲ್ಲ

bihar
01/06/2021

ಬಿಹಾರ: ಕಳೆದ ವರ್ಷ ಲಾಕ್​ ಡೌನ್​ ಸಂಕಷ್ಟದ ಸಂದರ್ಭದಲ್ಲಿ ಜ್ಯೋತಿ ಕುಮಾರಿ ಎಂಬ 15 ವರ್ಷದ ಬಾಲಕಿ ತನ್ನ ತಂದೆಯನ್ನ ಕೂರಿಸಿಕೊಂಡು ಬರೋಬ್ಬರಿ 1200 ಕಿಲೋಮೀಟರ್​ ವರೆಗೆ ಸೈಕಲ್​ ಚಲಾಯಿಸಿರುವ ಸುದ್ದಿಯನ್ನು ನೀವೂ ಓದಿರಬಹುದು.

ಸತತ 7 ದಿನಗಳ ಸಮಯದಲ್ಲಿ ತನ್ನ ತಂದೆಯನ್ನ ಸೈಕಲ್​ ಮೇಲೆ ಕೂರಿಸಿಕೊಂಡು ದೆಹಲಿಯ ಗುರುಗಾಂವ್​ ನಿಂದ ಈಕೆ ಬಿಹಾರದ ದರ್ಬಂಗಾವರೆಗೂ ಪ್ರಯಾಣ ಬೆಳೆಸುವ ಮೂಲಕ ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದಳು. ಆದರೆ ಇದೀಗ ಈ ಪುತ್ರಿಯ ತಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗುರುಗಾಂವ್​ ಗ್ರಾಮದ ಜ್ಯೋತಿ ಕುಮಾರಿ ತಂದೆ ಮೋಹನ್​ ಪಾಸ್ವಾನ್​ ಒಬ್ಬ ಆಟೋ ಡ್ರೈವರ್​ ಆಗಿದ್ದು ಅಪಘಾತವೊಂದರ ಬಳಿಕ ಕಳೆದ ವರ್ಷ ಮಾರ್ಚ್​ನಿಂದ ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾದ ಸ್ಥಿತಿಯಲ್ಲಿದ್ದರು.

ಕಳೆದ ವರ್ಷ ಮೊದಲ ಬಾರಿ ಲಾಕ್​ಡೌನ್​ ಆದೇಶ ಜಾರಿಯಾಗಿದ್ದ ವೇಳೆ ಸಾರ್ವಜನಿಕ ಸಾರಿಗೆ ಸೌಕರ್ಯವಿಲ್ಲದೇ ಅನೇಕ ಮಂದಿ ಸಂಕಷ್ಟವನ್ನ ಎದುರಿಸಿದ್ದರು. ಇದೇ ಸಾಲಿಗೆ ಸೇರಿದ್ದ ಜ್ಯೋತಿ ಬರೋಬ್ಬರಿ 1,200 ಕಿಲೋಮೀಟರ್​ ಸೈಕಲ್​ ಚಲಾಯಿಸಿದ್ದಳು.

ಇತ್ತೀಚಿನ ಸುದ್ದಿ