ಮೈಸೂರಿನ “ಒಡನಾಡಿ ಸೇವಾ ಸಂಸ್ಥೆ”ಯ ಬಗ್ಗೆ ಪ್ರಕಟವಾದ ಸುಳ್ಳು ಸುದ್ದಿಯ ಬಗ್ಗೆ ಕ್ಷಮೆಯಾಚಿಸುತ್ತೇವೆ | ಮಹಾನಾಯಕ ಮಾಧ್ಯಮ ಬಳಗ - Mahanayaka
8:12 PM Friday 20 - September 2024

ಮೈಸೂರಿನ “ಒಡನಾಡಿ ಸೇವಾ ಸಂಸ್ಥೆ”ಯ ಬಗ್ಗೆ ಪ್ರಕಟವಾದ ಸುಳ್ಳು ಸುದ್ದಿಯ ಬಗ್ಗೆ ಕ್ಷಮೆಯಾಚಿಸುತ್ತೇವೆ | ಮಹಾನಾಯಕ ಮಾಧ್ಯಮ ಬಳಗ

mahanayaka
01/06/2021

ಮಹಾನಾಯಕ ಅಂತರ್ಜಾಲ ಮಾಧ್ಯಮದಲ್ಲಿ ಮಾರ್ಚ್ 5ರಂದು ವರದಿಯಾಗಿದ್ದ ಸುದ್ದಿಯೊಂದು ತಪ್ಪು ಮಾಹಿತಿಯಿಂದ ಕೂಡಿದ್ದು, ಸುದ್ದಿ ಮೂಲಗಳಲ್ಲಿ ದೊರಕಿದ ಗೊಂದಲಕರ ಮಾಹಿತಿಯಿಂದಾಗಿ ಮಾಧ್ಯಮದಲ್ಲಿ ತಪ್ಪು ಮಾಹಿತಿ ಪ್ರಕಟವಾಗಿದೆ.

“ಬೃಹತ್ ಮಕ್ಕಳ ಮಾರಾಟ ಜಾಲ ಪತ್ತೆ | ಮೈಸೂರಿನ ಸಂಸ್ಥೆಗೆ ಮಂಗಳೂರಿನ ಲಿಂಕ್!” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯಲ್ಲಿ, ಮೈಸೂರು ಮೂಲದ ಒಡನಾಡಿ ಎಂಬ ಸಂಸ್ಥೆ ಮಕ್ಕಳ ಮಾರಾಟದ ಭಯಾನಕ ಮಾಫಿಯಾ ನಡೆಸುತ್ತಿದೆ ಎಂದು ತಪ್ಪು ಮಾಹಿತಿ ಪ್ರಕಟವಾಗಿದೆ. ವಾಸ್ತವವಾಗಿ, ಮೈಸೂರಿನ ಒಡನಾಡಿ ಸ್ವಯಂ ಸೇವಾ ಸಂಸ್ಥೆ ಈ ಬೃಹತ್  ಮಕ್ಕಳ ಮಾರಾಟ ಜಾಲವನ್ನು ಪತ್ತೆ ಹಚ್ಚಿದ ಸಂಸ್ಥೆಯಾಗಿದ್ದು, ಮಕ್ಕಳ ಕಳ್ಳ ಸಾಗಣೆಯ ಬಗ್ಗೆ ಮಂಗಳೂರಿನ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಬೃಹತ್ ಮಕ್ಕಳ ಕಳ್ಳ ಸಾಗಣೆ ಪ್ರಕರಣವನ್ನು ಬಯಲಿಗೆಳೆಯುವ ಕೆಲಸ ಮಾಡಿತ್ತು. ಆದರೆ ಸುದ್ದಿಯ ಮೂಲಗಳಿಂದ ಉಂಟಾದ ಗೊಂದಲಗಳಿಂದಾಗಿ  ಮಹಾನಾಯಕ ಅಂತರ್ಜಾಲ ಮಾಧ್ಯಮದಲ್ಲಿ ತಪ್ಪು ಮಾಹಿತಿ ಪ್ರಕಟವಾಗಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮವು  ಮೈಸೂರಿನ ಒಡನಾಡಿ ಸ್ವಯಂ ಸೇವಾ ಸಂಸ್ಥೆ ಹಾಗೂ ಓದುಗರಲ್ಲಿ ಕ್ಷಮೆಯಾಚಿಸುತ್ತದೆ. ಹಾಗೆಯೇ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಭರವಸೆ ನೀಡುತ್ತಿದ್ದೇವೆ.

ಮೈಸೂರಿನ ಒಡನಾಡಿ ಸ್ವಯಂ ಸೇವಾ ಸಂಸ್ಥೆ ಸಮಾಜದಲ್ಲಿ ಅತ್ಯುತ್ತಮವಾದ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ  ಮನ್ನಣೆ ಪಡೆದ ಒಡನಾಡಿ ಸೇವಾ ಸಂಸ್ಥೆಯು ಸಂಸ್ಥೆಯ ಸಂಸ್ಥಾಪಕರಾಗಿರುವ ಸ್ಟ್ಯಾನ್ಲಿ-ಪರಶು ಅವರ ನೇತೃತ್ವದಲ್ಲಿ ಹಲವಾರು ಸಾಮಾಜಿಕ ಹೋರಾಟವನ್ನು ಸಂಸ್ಥೆ ನಡೆಸುತ್ತಿದೆ. ಒಡನಾಡಿ ಸಂಸ್ಥೆಯು 30 ವರ್ಷಗಳಿಂದ ಸತತವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ಈ ಬಗ್ಗೆ ಸಮರ್ಪಕ ಮಾಹಿತಿಯ ಕೊರತೆಯ ಹಿನ್ನೆಲೆಯಲ್ಲಿ ಮಾಧ್ಯಮದಿಂದ ನಡೆದ ಪ್ರಮಾದಕ್ಕೆ ನಾವು ವಿಷಾಧಿಸುತ್ತೇವೆ.


Provided by

ಮಹಾನಾಯಕ ಮಾಧ್ಯಮದಲ್ಲಿ ಒಡನಾಡಿ ಸ್ವಯಂ ಸೇವಾ ಸಂಸ್ಥೆಯ ಬಗ್ಗೆ ಪ್ರಕಟವಾದ ಸುದ್ದಿ ಉದ್ದೇಶಪೂರ್ವಕವಾಗಿ ಅಲ್ಲ ಮತ್ತು ಇಂತಹ ತಪ್ಪುಗಳು ಮಾಧ್ಯಮದಲ್ಲಿ ಇನ್ನೆಂದಿಗೂ ಪ್ರಸಾರವಾಗಲು ಅವಕಾಶ ನೀಡುವುದಿಲ್ಲ, ಈ ವರದಿಯಿಂದ ನೊಂದಿರುವ ಸಂಸ್ಥೆ ಹಾಗೂ ಸಂಸ್ಥೆಯ ಅಭಿಮಾನಿಗಳು, ಸೇವಾ ಕಾರ್ಯಕರ್ತರು ಎಲ್ಲರಿಗೂ ಮಹಾನಾಯಕ ಮಾಧ್ಯಮ ಕ್ಷಮೆಯಾಚಿಸುತ್ತಿದ್ದು,  ಮುಂದಿನ ದಿನಗಳಲ್ಲಿ ಇಂತಹ ವರದಿಗಳಿಗೆ ಆಸ್ಪದ ನೀಡದಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡುತ್ತಿದ್ದೇವೆ.

ಧನ್ಯವಾದಗಳು

-ಸಂಪಾದಕರು

ಇತ್ತೀಚಿನ ಸುದ್ದಿ