ಕೊರೊನಾ ಭೀತಿ, ಆರ್ಥಿಕ ಸಂಕಷ್ಟ | ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
02/06/2021
ಚಾಮರಾಜನಗರ: ಕೊರೊನಾದ ಭಯ ಹಾಗೂ ಆರ್ಥಿಕ ಸಂಕಷ್ಟಕ್ಕೀಡಾದ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಮೂಕಹಳ್ಳಿಯಲ್ಲಿ ನಡೆದಿದೆ.
45 ವರ್ಷ ವಯಸ್ಸಿನ ಮಹದೇವಸ್ವಾಮಿ ಹಾಗೂ ಅವರ ಪತ್ನಿ ಮಂಗಳಮ್ಮ ಹಾಗೂ ಮಕ್ಕಳಾದ ಗೀತಾ, ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿಗಳ ಪ್ರಕಾರ 20 ದಿನಗಳ ಹಿಂದೆಯಷ್ಟೇ ಮಹದೇವಸ್ವಾಮಿ ಅವರು ಕೊವಿಡ್ ಸೋಂಕು ತಗಲಿ ಗುಣಮುಖರಾಗಿದ್ದರು. ಆದರೆ ಇದಾದ ಬಳಿಕ ಇದೀಗ ಇಡೀ ಕುಟುಂಬವೇ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.