ಪರಸ್ಪರ ಕಿತ್ತಾಡುತ್ತಾ, ಎರಡನೇ ಮಹಡಿಯಿಂದ ಕೆಳಗೆ ಬಿದ್ದ ದಂಪತಿ
ಸೈಂಟ್ ಪೀಟರ್ಸ್ ಬರ್ಗ್: ಬಾಲ್ಕನಿಯಲ್ಲಿ ಪತಿ-ಪತ್ನಿ ಜಗಳವಾಡುತ್ತಿರುವ ಸಂದರ್ಭದಲ್ಲಿ ಆಯ ತಪ್ಪಿ ಬಾಲ್ಕನಿಯಿಂದ ಬಿದ್ದ ವಿಡಿಯೋವೊಂದು ವೈರಲ್ ಆಗಿದೆ. ಓಲ್ಗಾ ವೊಲ್ಕೋವಾ ಮತ್ತು ಯೆವ್ಗಿನಿ ಕಾರ್ಲಗಿನ್ ಎನ್ನುವ ದಂಪತಿಯ ಜಗಳ ಈ ರೀತಿಯಾಗಿ ಅಂತ್ಯಗೊಂಡಿದೆ.
ಮನೆಯೊಳಗಿನಿಂದ ತೀವ್ರವಾಗಿ ಕಿತ್ತಾಟ ನಡೆಸುತ್ತಾ ಬಂದ ದಂಪತಿ, ಕಿರಿದಾದ ಬಾಲ್ಕನಿಗೂ ಹೊಡೆದಾಡುತ್ತಾ ಬಂದಿದ್ದಾರೆ. ತೀವ್ರ ಹೊಡೆದಾಟದ ಸಂದರ್ಭದಲ್ಲಿ ರಸ್ತಯಲ್ಲಿದ್ದ ವ್ಯಕ್ತಿಗಳು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.
ವಿಡಿಯೋದಲ್ಲಿ ಪತ್ನಿಯು ಪತಿ ಕಾಲನ್ನು ಜಗ್ಗಿ ರಸ್ತೆಗೆಸೆಯಲು ಯತ್ನಿಸಿದ್ದಾಳೆ. ಆದರೆ ಈ ಸಂದರ್ಭ ಬಾಲ್ಕನಿಯ ಗ್ರಿಲ್ ಮುರಿದು ಇಬ್ಬರು ಕೂಡ ಎರಡನೇ ಮಹಡಿಯಿಂದ ಫುಟ್ಪಾತ್ ಗೆ ಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#BehindtheScenes of a spot in the #stadiumstampede match at #AEWDoN #AEWDoubleorNothing. pic.twitter.com/lfcWKJtKGl
— 💀Heels Pops Chairshots💀 (@HPCBadGuys) May 30, 2021